ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಸ್ಯೆಗೆ ಸ್ಪಂದಿಸದ ಪಕ್ಷಗಳು

Rashmi Kasaragodu
Updated On : 27 Apr 2013, 10:44 am

ಮೂಡಿಗೆರೆ: ಇಲ್ಲಿಯವರೆಗೆ ಆಡಳಿತ ಮಾಡಿಕೊಂಡು ಬಂದಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರಿಗೆ ಉಪಯೋಗ ಮಾಡಿಕೊಡುವ ಪಕ್ಷಗಳಾಗಿದ್ದು, ಇಲ್ಲಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್ತೂ ಚಿಂತನೆ ನಡೆಸಿಲ್ಲ ಎಂದು ಸಿಪಿಐ ಪಕ್ಷದ ರಾಷ್ಟ್ರೀಯ ಸದಸ್ಯ ಡಾ. ಸಿದ್ದಣ್ಣ ಗೌಡ ಪಾಟೀಲ್ ಆರೋಪಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯ್ಲಲಿ ಮಾತನಾಡಿ, ಜನರ ಸಮಸ್ಯೆಗಳಿಗೆ ನಿರಂತರವಾಗಿ ಹೋರಟ ಮಾಡಿಕೊಂಡು ಬಂದಿರುವ ಪಕ್ಷ ಸಿಪಿಐ ಪಕ್ಷ ಮಾತ್ರ. 70ರ ದಶಕದಲ್ಲಿ ಭೂ ಸುಧಾರಣೆ ಬ್ಗಗೆ ಚರ್ಚೆ ನಡೆಸಲಾಗಿತ್ತು. ಅದರಲ್ಲಿ  ಉಳುವ ರೈತರಿಗೆ ಭೂಮಿ ಕೊಡಬೇಕೆಂದು ನಿರ್ಧರಿಸಿದ್ದು, ಆದರೆ ಇಂದು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗುತ್ತಿದೆ. ಜಮೀನನ್ನು ರೈತರಿಗೆ ಕೊಟ್ಟು ಅವರನ್ನು ರೈತರನ್ನಾಗಿ ಮಾಡುವುದೆ ಸಿಪಿಐ ಪಕ್ಷದ ಮೂಲ ಉದ್ದೇಶವಾಗಿದೆ. ಇದನ್ನು ಸಣ್ಣ ರೈತರು, ದೊಡ್ಡ ರೈತರು ಗಂಭೀರವಾಗಿ ಪರಿಗಣಿಸಬೇಕು ಎಂದರು.
   ವಿಧಾನಸೌಧದಲ್ಲಿ ಉಳ್ಳವರ ಪರ, ಗಣಿ ಮಾಫಿಯಾದಲ್ಲಿ ಕೈಜೋಡಿಸುವವರು ಬಿಟ್ಟರೆ ಬಡವರ, ದಲಿತರ, ರೈತರ ಪರವಾಗಿ ಧ್ವನಿ ಎತ್ತುವ ಶಾಸಕರು ಯಾವ ಪಕ್ಷಗಳಲ್ಲುಯೂ ಇಲ್ಲಾ. ಆದ್ದರಿಂದ ಬಡವರ ದಲಿತರ, ರೈತರ ಪರವಾಗಿ ಧ್ವನಿ ಎತ್ತಲು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸಿಪಿಐ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾರರು ಒಂದು ಅವಕಾಶವನ್ನು ಕೊಟ್ಟು ನೋಡಿ ಮನವಿ ಮಾಡಿದರು. ಗೋಷ್ಠಿಯಲ್ಲಿ ಸಿಪಿಐ ಮುಖಂಡರಾದ ಲಕ್ಷ್ಮಣ್ ಗೌಡ, ಡಿ.ಸಿ. ರಮೇಶ್, ಹರೀಶ್, ದೇವವೃಂದ ರವಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement