ಬಿಎಸ್ಆರ್ ಕಾಂಗ್ರೆಸ್ ಮತಯಾಚನೆ
ತರೀಕೆರೆ: ಬಿ.ಎಸ್.ಆರ್. ಕಾಂಗ್ರೆಸ್ನಿಂದ ಲಕ್ಕವಳ್ಳಿ ಮಾರಿಕಾಂಬಾ ದೇವಸ್ಥಾನದಿಂದ ತರೀಕೆರೆ ಸಾಲುಮರದಮ್ಮ ದೇವಸ್ಥಾನದವರೆಗೆ 24 ಕೀ.ಮಿ. ಪಾದಯಾತ್ರೆ ಮೂಲಕ ಮತಯಾಚನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾರಿಕಾಂಬ ದೇವಸ್ಥಾನ, ಹಳೇ ಲಕ್ಕವಳ್ಳಿ, ಕೆಂಚಿಕೊಪ್ಪಲು, ಹೆಸರುಗೊಪ್ಪ, ಹಲಸೂರು, ರಂಗೇನಹಳ್ಳಿ, ಮುಡುಗೋಡು, ಹೊಸಮನೆ, ಗಂಜಿಗೆರೆ, ಬಾವಿಕೆರೆ, ಜಮತಳ, ದುಗ್ಲಾಪುರ, ದುಗ್ಲಾಪುರ ಸ್ಟೇಷನ್, ರಾಂಪುರ, ತರೀಕೆರೆ ಕ್ರಾಸ್, ತರೀಕೆರೆ ಪಟ್ಟಣ, ಬಿ.ಎಚ್. ರೋಡ್, ಸಾಲುಮರದಮ್ಮನವರ ದೇವಸ್ಥಾನದ ವರೆಗೆ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಲಾಯಿತು.