ವಿರೋಧಿಗಳ ಹೇಳಿಕೆ ಸುಳ್ಳು: ರಾಜು
ಮೂಡಿಗೆರೆ: ಕ್ಷೇತ್ರದಲ್ಲಿ ಬಿಎಸ್ಸಾರ್ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿದ್ದು, ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದೇವೆ ಎಂದು ಕ್ಷೇತ್ರ ಅಧ್ಯಕ್ಷ ಎಸ್.ಪಿ. ರಾಜು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಲವರು ಪಕ್ಷ ನೆಲಕ್ಕಚ್ಚಿದೆ, ಪಕ್ಷ ಮುಚ್ಚಿ ಹೋಗುತ್ತದೆ ಎಂದು ಹೇಳಿರುವುದು ಶುದ್ಧ ಸುಳ್ಳು. ಕ್ಷೇತ್ರದಲ್ಲಿ ಬಿಎಸ್‌ಆರ್ ಪಕ್ಷ ಸ್ಪರ್ಧಿಸದಿದ್ದರೂ ಸಂಘಟನೆ ದಿನೇದಿನೇ ಬೆಳೆಯುತ್ತಿದೆ. ಮುಂದೆ ಸ್ಥಳೀಯ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸಲು ಪಕ್ಷ ಈಗಿನಿಂದಲೇ ತಯಾರಿ ನಡೆಸುತ್ತಿದೆ ಎಂದರು.
ಈ ಬಾರಿ ಮೂಡಿಗೆರೆ ಕ್ಷೇತ್ರದಲ್ಲಿ ಬಡವರ, ಶ್ರಮಿಕರ, ರೈತರ ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಕಾಳಜಿ ಇರುವಂಥ ಪಕ್ಷವನ್ನು ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಂದುಗೂಡಿ ಬೆಂಬಲಿಸಲಿದ್ದೇವೆ ಎಂದರು.
ಈ ವೇಳೆ ಶಿವಣ್ಣಗೌಡ, ಎಂ.ಎಸ್. ಸಲೀಂ, ರಾಜೇಶ್ವರಿ, ಸುಧಾ ರಮೇಶ್, ಲತಾ ಪೂವಯ್ಯ, ಎಂ.ಆರ್. ಸುರೇಶ್, ಪರಮೇಶ್ವರ್ ಹೆಬ್ಬಾರ್, ಜಯಪಾಲ್, ರಮ್ಯಪ್ರಸಾದ್, ಕೆ. ಭೋಜ ಭಂಡಾರಿ ಮತ್ತಿತರರಿದ್ದರು.