ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Mainashree
Updated On : 28 Apr 2013, 12:05 pm

ಕಡೂರಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪ್ರಚಾರ
ಕಡೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಆರ್ ಪಕ್ಷಕ್ಕೆ ಆಂತರಿಕವಾಗಿ ಒಲವು ವ್ಯಕ್ತವಾಗುತ್ತಿದ್ದು ಆ ಮೂಲಕ ಪಕ್ಷದ ಅಭ್ಯರ್ಥಿ ಕೆ.ಎಂ.ಕೆಂಪರಾಜುರವರು ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ಮುಖಂಡ ಶರತ್ ಕೃಷ್ಣಮೂರ್ತಿ ಹೇಳಿದರು.  ಕಡೂರು ಪಟ್ಟಣದ 10ನೇ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಂ.ಕೆಂಪರಾಜು ಪರವಾಗಿ ಮಾತಯಾಚನೆ ಮಾಡಿ, ಬಿಎಸ್‌ಆರ್ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವ ಮೂಲಕ ಕೆ.ಎಂ.ಕೆಂಪರಾಜುರವರ ಬಗ್ಗೆಯೂ ಜನರಲ್ಲಿ ವಿಶ್ವಾಸ ವ್ಯಕ್ತವಾಗುತ್ತಿದೆ ಎಂದರು.  ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಅಶೋಕ್, ಫಯಾಜ್, ಇಭ್ರಾಹಿಂ, ಸೀಗೇಹಡ್ಲು ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ್, ರಮೇಶ್, ಮುಕ್ತಿಯಾರ್, ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾಗಿ ಪ್ರಶಾಂತ್ ಆಯ್ಕೆ
ಮೂಡಿಗೆರೆ: ಬಿಜೆಪಿಯಿಂದ ಜೆಡಿಎಸ್‌ಗೆ ಸೇರ್ಪಡೆಯಾದ ಬಾಳೂರು ಹೋಬಳಿಯ ದುರ್ಗದಹಳ್ಳಿಯ ಪ್ರಶಾಂತ್ ಎಂಬವರನ್ನು ಜೆಡಿಎಸ್‌ನ ಬಾಳೂರು ಹೋಬಳಿ ಉಪಾಧ್ಯಕ್ಷರನ್ನಾಗಿ ಹಾಗೂ ಮಹೇಶ್ ಎಂಬವರನ್ನು ಬಾಳೂರು ಹೋಬಳಿ ಯುವ ಜನತಾ ದಳದ ಪದಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಬಾಳೂರು ಲಕ್ಷಣ್ ತಿಳಿಸಿದ್ದಾರೆ.
ಸ್ವ ಅಭಿವೃದ್ಧಿಗಾಗಿ ಸಂಪತ್ತು ಲೂಟಿ
ಮೂಡಿಗೆರೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಚುನಾಯಿತರು ಜನಸೇವಕರಲ್ಲ. ಬದಲು ಸ್ವ ಅಭಿವೃದ್ಧಿಗಾಗಿ ರಾಜ್ಯದ ಸಂಪತ್ತುಗಳನ್ನು ಲೂಟಿ ಹೊಡೆಯುವ ಭ್ರಷ್ಟಾಚಾರಿಗಳು ಎನ್ನುವ ಅರಿವಿನಿಂದ ಜನರ ಪರ ಧ್ವನಿಯಾಗಿ ನಿಲ್ಲಬಲ್ಲ ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸುವ ಸೌಜನ್ಯ ತೋರಬೇಕು ಎಂದು  ಸಾಹಿತಿ ದೇವನೂರು ಮಹಾದೇವ ಹೇಳಿದರು.  ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಇಂದು ಚುನಾವಣೆ ಎದುರಿಸಿದ ಬಳಿಕ ಶಾಸಕರ ಆಸ್ತಿಯ ಪ್ರಮಾಣ ಕೋಟಿಗೇರುತ್ತಿದೆ. ನಾಡಿನ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಮರಳುಗೊಳಿಸಿ ಅಧಿಕಾರಕ್ಕೆ ಬರುವವರು ಜನವಿರೋಧಿ ನೀತಿ ಅನುಸರಿಸಿ ರಾಜ್ಯದ ಜನರ ಹಿತವನ್ನು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವಿದೇಶಿಗರ ಕೈಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.   ಸಿಪಿಐ ರಾಷ್ಟ್ರೀಯ ಸದಸ್ಯ ಸಿದ್ಧನಗೌಡ ಪಾಟೀಲ್ ಮಾತನಾಡಿದರು.   ಆರ್ಥಿಕ ತಜ್ಞ ಪಾರ್ಥಸಾರಥಿ, ಚಿಂತಕ ಶೇಷಾದ್ರಿ, ಎಐಟಿಯುಸಿ ಬಿ. ಬಾಬು, ಮೈಸೂರಿನ ರಾಜು, ಅಭ್ಯರ್ಥಿ  ಸಾತಿ ಸುಂದರೇಶ್, ಬ್ಯಾಂಕ್ ಅಧಿಕಾರಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ್, ನಾಗಕುಮಾರ್, ಲಕ್ಷಣಕುಮಾರ್, ಪುಟ್ಟಸ್ವಾಮಿ ಗೌಡ, ಮಂಜುನಾಥ್ ಗೌಡ, ದೇವರುಂದ ರವಿ, ಹರೀಶ್, ಜ್ಯೋತಿ ಸುಂದರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement