ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅವನತಿ ಅಂಚಿಗೆ ದೇಶಿ ಸಂಸ್ಕೃತಿ; ಅನಂತರಾಮಯ್ಯ

Lingaraj Badiger
Updated On : 29 Apr 2013, 10:56 am

ಚಿಕ್ಕಮಗಳೂರು: ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣಿಯಿಂದಾಗಿ ದೇಶಿ ಸಂಸ್ಕೃತಿ ಅವನತಿಯ ಅಂಚಿಗೆ ತಲುಪಿದ್ದು, ಮಾನವೀಯ ಸಂಬಂಧಗಳ ಕೊಂಡಿ ಕಳಚಿ ಹೋಗುತ್ತಿದೆ ಎಂದು ವಿಪ್ರ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಂತರಾಮಯ್ಯ ವಿಷಾದಿಸಿದರು.
ಕಳೆದ ಏಳು ದಿನಗಳ ಕಾಲ ಶ್ರೀ ರಾಮೋತ್ಸವ ಸೇವಾ ಸಮಿತಿ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಲುವಾಗಿ ಪ್ರತಿವರ್ಷ ರಾಮೋತ್ಸವ ಸಂದರ್ಭದಲ್ಲಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಒಳ್ಳೆಯ ಸಂಸ್ಕೃತಿ, ಸಂಪ್ರದಾಯ ಬೆಳೆಸಬೇಕು. ಕಂಪ್ಯೂಟರ್ ಯುಗದಲ್ಲಿ ನಶಿಸುತ್ತಿರುವ ನಮ್ಮ ಸಂಸ್ಕೃತಿ, ಕಲೆ ಉಳಿಸುವ ಜವಾಬ್ದಾರಿ ಸಮಾಜದ ಹಿರಿಯರದ್ದಾಗಿದೆ ಎಂದರು.
ಹಿಂದಿನಿಂದಲೂ ಜಾತ್ರೆ ಉತ್ಸವ ಮುಂತಾದ ಹಬ್ಬಗಳನ್ನು ಆಚರಿಸಿಕೊಂಡು ಬಂದ ಪರಿಣಾಮ ಮಾನವೀಯ ಸಂಬಂಧಗಳು ಗಟ್ಟಿಯಾಗಿವೆ ಎಂದ ಅವರು, ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಬೇಕೆಂದರು.
ನೃತ್ಯ, ವೇಷಭೂಷಣ ಸ್ಪರ್ಧೆ, ಭಗವದ್ಗೀತೆ ಪಠಣ, ರಾಮಾಯಣ, ರಸಪ್ರಶ್ನೆ, ರಂಗೋಲಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಬ್ರಾಹ್ಮಣ ಮಹಾಸಭಾದ ಖಜಾಂಚಿ ಗಣೇಶ್‌ಕುಮಾರ್ ಮಾತನಾಡಿದರು. ರಾಮೋತ್ಸವ ಸಮಿತಿ ಸದಸ್ಯ ಶ್ರೀಧರ್, ಎಚ್.ಎಸ್. ನಾಗೇಶ್, ಗುರುಮೂರ್ತಿ ಉಪಸ್ಥಿತರಿದ್ದರು. ಶೋಭಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement