ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದರ್ಬಾರ್ ನಡೆಸದೆ ಕೆಲಸ ಮಾಡಿದ್ದೇನೆ

Lingaraj Badiger
Updated On : 29 Apr 2013, 10:47 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.28
ಶಾಸಕನಾದಾಗಿನಿಂದ ಜನ ಸಾಮಾನ್ಯರೊಂದಿಗೆ ಬೆರೆತು ಮಂತ್ರಿಯಾದ ಮೇಲೆ ಗತ್ತಿನ ದರ್ಬಾರ್ ತೋರದೆ ಕೂಲಿ ಕಾರ್ಮಿಕರಿಗೆ ಅಣ್ಣನಾಗಿ, ಭಿಕ್ಷುಕರಿಗೆ ಮಗನಾಗಿ ಸಲಿಗೆಯಿಂದ ನಡೆದು ಕೊಂಡಿದ್ದೆ ತಪ್ಪೆಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳಿಗೆ ಮತದಾರರು ಬುದ್ದಿ ಕಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಕರೆ ನೀಡಿದ್ದಾರೆ.
ನಗರದ ಹೊರವಲಯದ ಇಂದಾವರ, ಹುಕ್ಕುಂದ, ಬಂಡಿಹಳ್ಳಿ, ಬಿಳೇಕಲ್ಲಳ್ಳಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡಿ ನಂತರ ಅವರು ಮಾತನಾಡಿದರು.
ಅಭಿವೃದ್ಧಿಗಾಗಿ ಜಗಳ: ಅಧಿಕಾರಕ್ಕಾಗಿ ಬ್ಲಾಕ್ ಮೇಲೆ ರಾಜಕಾರಣ ಮಾಡಿ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಾಣದ ಕೈಗಳು ನನಗೆ ಮಂತ್ರಿಸ್ಥಾನ ತಪ್ಪಿಸುತ್ತಿದ್ದವು. ನನ್ನ ಕ್ಷೇತ್ರದ ಅಭಿವೃದ್ದಿಗಾಗಿ ಜಗಳವಾಡಿದ್ದೇನೆಯೇ ಹೊರತು ಅಧಿಕಾರಕ್ಕಾಗಿ ಮಾಡಿಲ್ಲ ಎಂದರು.
 ಹಣವಿಲ್ಲದ ಬಡವ ಶಿಕ್ಷಣವಂತನಾಗಬೇಕು, ವೈದ್ಯರಾಗಬೇಕು, ಆರ್ಥಿಕವಾಗಿ ಹಿಂದುಳಿದ ನಿರ್ಗತಿಕರಿಗೆ ಹೈಟೆಕ್ ಚಿಕಿತ್ಸೆ ಒದಗಿಸಬೇಕು ಎಂಬುದಕ್ಕಾಗಿ ನೀವು ಕೊಟ್ಟ ಅಧಿಕಾರ ಬಳಸಿ ಮಡಿಕಲ್ ಕಾಲೇಜು ತಂದೆ. ಇಂತಹ ಜನಪರ ಕಾರ್ಯಗಳನ್ನು ಸಹಿಸದೆ ವಿರೋಧ ಪಕ್ಷಗಳು ಕುತಂತ್ರ ನಡೆಸಿ ಕ್ಷೇತ್ರದ ಅಭಿವೃದ್ದಿಗೆ ಕಲ್ಲು ಹಾಕುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಈರಯ್ಯ, ರಂಗನಾಥ್, ಕನಕರಾಜ್, ಕಿರಣ್, ವರಸಿದ್ದಿ ವೇಣುಗೋಪಾಲ್, ಪುಟ್ಟೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement