ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ

Lingaraj Badiger
Updated On : 29 Apr 2013, 10:55 am

ಕ.ಪ್ರ.ವಾರ್ತೆ,ಬೀರೂರು/ಕಡೂರು, ಏ.28
ಪ್ರಾದೇಶಿಕ ಪಕ್ಷಗಳು ಕೇವಲ ಸಮ್ಮಿಶ್ರ ಸರ್ಕಾರ ರಚನೆಗೆ ಹಾತೊರೆಯುತ್ತವೆಯೇ ವಿನಹ ಅವುಗಳಿಂದ ಯಾವುದೇ ಸಮಗ್ರ ಅಭಿವೃದ್ದಿ ನಿರೀಕ್ಷಿಸಲು ಸಾದ್ಯವಿಲ್ಲದಿರುವುದರಿಂದ ಕರ್ನಾಟಕದ ಸಮಗ್ರ ಅಭಿವೃದ್ದಿಯು ಕಾಂಗ್ರೆಸ್‌ನಿಂದ ಮಾತ್ರ ಸಾದ್ಯ ಎಂದು ಮಾಜಿ ವಿದೇಶಾಂಗ ಸಚಿವ ಹಾಗು ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಹೇಳಿದರು.           
ಬೀರೂರು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ರ್‌ವರ ಪರವಾಗಿ ಚುನಾವಣಾ ಪ್ರಚಾರದ ಭಾಷಣ ಮಾಡಿ ಮಾತನಾಡುತ್ತಿದ್ದರು. 2004 ರಿಂದ ಈಚೆಗೆ ಈ ರಾಜ್ಯದ ರಾಜಕಾರಣದ ಬೆಳವಣಿಗೆಯು ಆತಂಕಕಾರಿಯಾಗಿದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ದೊಡ್ಡ ಕಳಂಕ ಎಂದರು.
ಅನಿಷ್ಟ ಕಿತ್ತೊಗೆಯಿರಿ: ಬಿಜೆಪಿ ಸರ್ಕಾರ ಈ ರಾಜ್ಯಕ್ಕೆ ಬಡಿದ ಅನಿಷ್ಟವಾಗಿದೆ. ಈ ಅನಿಷ್ಟವನ್ನು ಕಿತ್ತೊಗೆಯುವ ದಿನಗಳು ಹತ್ತಿರವಾಗಿವೆ.  ಐದು ವರ್ಷದಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ಕಂಡಿರುವ ರಾಜ್ಯವನ್ನು ಅಧೋಗತಿಯತ್ತ ಕೊಂಡೊಯ್ಯುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗುವ ಸ್ಥಿತಿ ಎದುರಾಗಿರಲಿಲ್ಲ. ಆದರೆ ಅದೂ ನಡೆಯುವ ಮೂಲಕ ಕರ್ನಾಟಕದ ಕಳಂಕವನ್ನು ಪ್ರಪಂಚಕ್ಕೆ ತೋರಿಸಿದೆ ಎಂದು ಟೀಕಿಸಿದರು.
ಬಿಜೆಪಿ ನಡವಳಿಕೆಯಿಂದ ಸಂಕಟವಾಗಿದ್ದು ಆ ಮೂಲಕ ರಾಜ್ಯದಲ್ಲಿ ಯಾವುದೇ ಅಭಿವೃದ್ದಿಯ ಮಾತು ಹುಸಿಯಾಗಿವೆ. ಇದೀಗ ನಮಗೆ ಬದಲಾವಣೆ ಬೇಕಾಗಿದೆ. ಅದು ಈ ಕ್ಷೇತ್ರದ ಕೆ.ಬಿ.ಮಲ್ಲಿಕಾರ್ಜುನ್, ಶೃಂಗೇರಿಯ ಟಿ.ಡಿ. ರಾಜೇಗೌಡರಂತಹ ನಿಷ್ಕಳಂಕ ವ್ಯಕ್ತಿಗಳ ಆಯ್ಕೆಯಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಸರ್ಕಾರ ರಚಿಸಲು ಜನರು ಮತ ನೀಡಬೇಕು ಎಂದು ಹೇಳಿದರು.  
ಸಮಿಶ್ರ ಸರ್ಕಾರ ಬೇಡ: ಈ ಮಲೆನಾಡು ಮತ್ತು ಮಲೆನಾಡಿನ ಗಾಂಧಿ ಗೋವಿಂದೇಗೌಡರಂತವರು ಈ ಜಿಲ್ಲೆಗೆ ಕಳಶಪ್ರಾಯರಾಗಿದ್ದು ಪ್ರಸಕ್ತ ರಾಜಕಾರಣಕ್ಕೆ ಆದರ್ಶಪ್ರಾಯರಾಗಿದ್ದಾರೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಎಂಬುದು ಶಾಪವಾಗಿ ಪರಿಣಮಿಸಿದ ಇಂತಹ ಸಮ್ಮಿಶ್ರ ಸರ್ಕಾರಗಳಿಂದ ರಾಜ್ಯದ ಯಾವುದೇ ಅಭಿವೃದ್ದಿ ನಿರೀಕ್ಷಿಸಲು ಸಾದ್ಯವಿಲ್ಲ.  
ಬಿಜೆಪಿ ಸರ್ಕಾರದ ಕಾರ್ಯ ವೈಖರಿಯನ್ನು ನೋಡಿರುವ ರಾಜ್ಯದ ಜನರು ಇಂತಹ ಸರ್ಕಾರಗಳ ಅವಶ್ಯಕತೆ ನಮಗಿಲ್ಲ ಎಂಬ ಮನೋಭಾವ ತಳೆದಿದ್ದಾರೆ.ಬಿ.ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಅವರು ಕೋರಿದರು.                                                                 ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ಪ್‌ಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಎಸ್.ಎಂ.ಕೃಷ್ಣ ಬರಮಾಡಿಕೊಂಡರು.
ಸಭೆಯಲ್ಲಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್  ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಕಡೂರು ಹಾಗು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಹೆಚ್. ಚಂದ್ರಪ್ಪ, ಕೆಂ.ಎಂ. ವಿನಾಯಕ್, ಕಡೂರು ಕಾಂಗ್ರೆಸ್ಯುವ ಘಟಕದ ಅಧ್ಯಕ್ಷ ಕೆ.ಎಸ್.ಆನಂದ್, ಪುರಸಭಾ ಸದಸ್ಯರಾದ ಡಿ.ಆರ್.ಯತೀಶ್,ಜಯಣ್ಣ,ಸಾವಿತ್ರಿ ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement