ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೆಸಾರ್ಟ್ ರಾಜಕೀಯದಿಂದ ಸಂಪತ್ತು ಲೂಟಿ

Lingaraj Badiger
Updated On : 29 Apr 2013, 10:56 am

ಕ.ಪ್ರ.ವಾರ್ತೆ,ಬೀರೂರುಟಿ  ಏ.28
ರೆಸಾರ್ಟ್ ರಾಜಕೀಯ ಮಾಡುತ್ತಾ ರಾಜ್ಯದ ಸಂಪತ್ತು ಲೂಟಿ ಮಾಡಿ ಹಗರದಲ್ಲಿ  ಮುಳುಗಿ ಬಡವರಿಗೆ ನೀರು, ಸೂರು ನೀಡದೇ ಕೇಶವ ಕೃಪಾದಿಂದ ಆಡಳಿತ ನಡೆಸಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ಮುಖಂಡರಾದ ಮೋಟಮ್ಮ ಆರೋಪಿಸಿದರು.      
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಹಣ ಬಲದಿಂದಲೋ ಜನಬಲದಿಂದಲೋ ಎಂಬುದು ತೀರ್ಮಾನವಾಗಲಿದ್ದು, ಮತದಾರರು ಜನಬಲದಿಂದ ಎಂಬುದನ್ನು ತಮ್ಮ ಮತಗಳನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ಸಾಬೀತುಪಡಿಸಬೇಕಿದೆ. ಜನ ಮೈಮರೆತು ಮತ ಚಲಾಯಿಸಿದರೆ ಬಿಜೆಪಿಯಂತಹ ದುರಾಡಳಿತ ಮರುಕಳಿಸಬೇಕಾದೀತು ಎಂದು ಎಚ್ಚರಿಸಿದರು.
ಕುರ್ಚಿಯ ಆಟ: ರೆಸಾರ್ಟ್ ರಾಜಕಾರಣ ಮಾಡಿದ ಭ್ರಷ್ಟ ಬಿಜೆಪಿ ಸರ್ಕಾರವು ಈ ರೆಸಾರ್ಟ್ ರಾಜಕಾರಣಕ್ಕಾಗಿ ರಾಜ್ಯದಲ್ಲಿ 12 ದಿನ ಸರ್ಕಾರ ಸತ್ತು ಹೋಯಿತು.
ಬರಗಾಲದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಕೇವಲ ಅಧಿಕಾರಕ್ಕಾಗಿ ಬಿಜೆಪಿ ಸರ್ಕಾರ ಮೂರು ಜನ ಮುಖ್ಯಮಂತ್ರಿಗಳನ್ನು ಬದಲಾಯಿಸಿ ಕುರ್ಚಿಯ ಆಟ ಆಡುತ್ತಾ ಬಜೆಟ್ ಮಂಡನೆ ನಾಟಕ ಆಡುತ್ತಾ ಕೇಶವ ಕೃಪಾದಿಂದ ಆಡಳಿತ ನಡೆಸಿ ರಾಜ್ಯವ್ನನು ಅರಾಜಕತೆಯ ಸ್ಥಿತಿಯತ್ತ ತಳ್ಳಿತು ಎಂದರು.
1999 ರಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದ್ದರೂ,  ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ದಿಟ್ಟತನದಿಂದ ಹಣಕಾಸು ವ್ಯವಸ್ಥೆ ಮಾಡಿ ರಾಜ್ಯದ ಅಭಿವೃದ್ಧಿಗೆ  ಶ್ರಮಿಸಿ ಉತ್ತಮ ಆಡಳಿತ ನೀಡಿದರು ಎಂದರು.
ಮಹಿಳಾ ಸ್ವಾವಲಂಬನೆ: ಅಲ್ಲದೆ ರಾಜ್ಯದ 11 ಲಕ್ಷ ಮಹಿಳೆಯರಿಗೆ 1.75 ಲಕ್ಷ ಸ್ತ್ರೀ ಶಕ್ತಿ ಸಂಘಟನೆ ಮೂಲಕ ಅನುದಾನ ನೀಡಿ ಇಂದು ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಅನುವು ಮಾಡಿಕೊಟ್ಟವರು ಎಸ್.ಎಂ. ಕೃಷ್ಣ ಮತ್ತು ಕಾಂಗ್ರೆಸ್ ಎಂಬುದನ್ನು ಮಹಿಳೆಯರು ಮರೆಯದೆ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಬೇಕು ಎಂದರು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಅವರಿಗೆ ಮತನೀಡಿ ಕಾಂಗ್ರೆಸ್ ಗೆಲ್ಲಿಸಿ ರಾಜ್ಯದ ಉತ್ತಮ ಸರ್ಕಾರದ ರಚನೆಯಲ್ಲಿ ಮತದಾರರು ಪಾಲ್ಗೊಳ್ಳಬೇಕು ಎಂದು ಮೋಟಮ್ಮ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement