ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮುದಾಯ ಬದ್ಧವಲ್ಲ: ನಾಗೇಂದ್ರ ರಾವ್

Lingaraj Badiger
Updated On : 29 Apr 2013, 10:56 am

ಕೊಪ್ಪ:  ಶೃಂಗೇರಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯ ಈ ಕಾಲಘಟ್ಟದಲ್ಲಿ ಶೃಂಗೇರಿ ಕ್ಷೇತ್ರ ಬ್ರಾಹ್ಮಣ ಪರಿಷತ್ ಎನ್ನುವ ಸಂಘಟನೆ ಹುಟ್ಟಿಕೊಂಡಿದ್ದು, ಯಾವುದೇ ರಾಜಕೀಯ ಪ್ರೇರಿತವಲ್ಲ ಎಂದು ಹೇಳಿಕೊಂಡಿದ್ದರೂ ಅವರ ಕರಪತ್ರವನ್ನು ಓದಿದಾಗ ಇದು ರಾಜಕೀಯ ಪ್ರೇರಿತ ಎಂದು ತಿಳಿಯುತ್ತಿರುವುದರಿಂದ ಈ ರಾಜಕೀಯ ನಿರ್ಣಯಕ್ಕೆ ಬ್ರಾಹ್ಮಣ ಸಮುದಾಯವು ಬದ್ಧವಲ್ಲ ಎಂದು ಬ್ರಾಹ್ಮಣ ಸಮುದಾಯದ ಮುಖಂಡ ಗೋಳ್ಗಾರು ನಾಗೇಂದ್ರ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಬ್ರಾಹ್ಮಣ ಪರಿಷತ್ ರಚಿಸುತ್ತಿರುವ ಬಗ್ಗೆ ಪ್ರಕಟಣೆಯನ್ನಾಗಲೀ, ಪೂರ್ವಭಾವಿ ಸಭೆಯನ್ನಾಗಲೀ ಚರ್ಚೆಯನ್ನಾಗಲೀ ನಡೆಸದೇ  ರಾಜಕೀಯ ಲಾಭ ಪಡೆಯಲು ಮಾಡಿದ್ದಾಗಿರುತ್ತೆ. ಶೃಂಗೇರಿ ಕ್ಷೇತ್ರ ಬ್ರಾಹ್ಮಣ ಪರಿಷತ್ ಎನ್ನುವ ಸಂಘಟನೆಯನ್ನು ಹುಟ್ಟುಹಾಕಿ ಪತ್ರಿಕಾ ಹೇಳಿಕೆ ನೀಡಿರುವುದು ಈ ಸಂಘಟನೆಯು ರಾಜಕೀಯ ಪ್ರೇರಿತ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement