ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ

Lingaraj Badiger
Updated On : 30 Apr 2013, 10:57 am

ಕೊಪ್ಪ: ಕಾಂಗ್ರೆಸ್ ನಾಯಕರು ಶೃಂಗೇರಿ ಕ್ಷೇತ್ರದ ಚುನಾವಣೆಯಲ್ಲಿ ಒಡೆದು ಆಳುವ ನೀತಿ ಅನುಸರಿಸಿ, ವರ್ಗಗಳಲ್ಲಿ ಬಿರುಕು ಹುಟ್ಟಿಸಿ ಮತ ಪಡೆಯುವ ಹುನ್ನಾರ ನಡೆಸುತ್ತಿರುವುದು ವಿಷಾದನೀಯ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೊಂಡಿಬೈಲು ಚಂದ್ರಶೇಖರ ಜೋಯಿಸ್ ವಿಷಾದ ವ್ಯಕ್ತಪಡಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಖಂಡತೆ, ಐಕ್ಯೆತೆ, ಸುಭದ್ರನಾಡು ಕಟ್ಟುವ ವಿಚಾರ ಮರೆತು ಅಪ ಪ್ರಚಾರದ ಗುಂಗಿನಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ಆದರೆ ಬಿಜೆಪಿ ನಾಯಕರು ಸಾಮಾಜಿಕತೆ, ದೇಶದ ಹಿತ, ಭಾರತೀಯ ಸಂಸ್ಕೃತಿ ರಕ್ಷಣೆಯಂತಹ ನೈಜ ವಿಚಾರಗಳು ಮತ್ತು ಬಿಜೆಪಿ ಅಧಿಕಾರಾವಧಿಯಲ್ಲಿ ಸಾಧಿಸಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಕ್ಷೇತ್ರದ ಮತದಾರಿಗೆ ಬಿಜೆಪಿಯ ಬಗ್ಗೆ ಒಲವು ಮೂಡಿರುವುದು ವ್ಯಕ್ತವಾಗುತ್ತಿದೆ ಎಂದರು.
 ಈ ಹಿಂದೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ರೈತರ ಅಭಿವೃದ್ಧಿಗೆ ಪ್ರತ್ಯೇಕ ಆಯವ್ಯಯ ಮಂಡಿಸಿ ರೈತರಿಗೆ ರು. 1 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ, 3ಲಕ್ಷದವರೆಗೆ ಶೇ.2 ಬಡ್ಡಿಯ ಸಾಲವನ್ನು ನೀಡಿದೆ ಎಂದರು.
 ರಾಜ್ಯದ 5 ನಗರಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಉತ್ತಮ ನಿರ್ವಹಣೆಗಾಗಿ ರಾಷ್ಟ್ರೀಯ ನಗರ ನೀರು ಪ್ರಸಸ್ತಿಹಾಗೂ ಸ್ವಚ್ಛತಾ ಪ್ರಶಸ್ತಿ, ರಾಜ್ಯ ಸಾರಿಗೆ ಸಂಸ್ಥೆಗೆ ಕಳೆದ 3 ವರ್ಷದಲ್ಲಿ 30 ಪ್ರಶಸ್ತಿಗಳು ಲಭಿಸಿದ್ದು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಪ್ರಶಂಸಿ ಹತ್ತು ಹಲವು ಪ್ರಶಸ್ತಿಗಳು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹುಡುಕಿಕೊಂಡು ಬಂದಿರುವುದರಿಂದ ಮತದಾರ ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ದಯಾಕರ್, ನಾಗೇಂದ್ರ ಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement