'ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ದೊಡ್ಡದು'
ಕ.ಪ್ರ.ವಾರ್ತೆ, ತರೀಕೆರೆ, ಏ.29
ಪ್ರಜಾಪ್ರಭುತ್ವದಲ್ಲಿ ಜನಶಕ್ತಿಯೇ ದೊಡ್ಡದು ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಹೇಳಿದರು.
ಸೋಮವಾರ, ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಲ್ಲಿಕಾರ್ಜುನಪ್ಪ ಮತ್ತಿತರ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹಿನ್ನೆಲೆಯಲ್ಲಿ ಏರ್ಪಾಡಾಗಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಭಿವೃದ್ದಿ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ, ತಪ್ಪು ಮಾಡಿದವರಿಗೆ ಶಿಕ್ಷೆಯೂ ಆಗಬೇಕು ಅದು ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುತ್ತದೆ, ಮಾನವೀಯತೆ, ಪ್ರೀತಿ ಬೆಳೆಸಿಕೊಳ್ಳಬೇಕು. ಎಸ್.ಎಂ.ಕೃಷ್ಣ ಮೌನಕ್ರಾಂತಿ ಮಾಡಿದರು, ಅಕ್ಷರದಾಸೋಹ ತಂದರು, ವೀರಪ್ಪ ಮೊಯ್ಲಿ ಪಂಚಾಯತ್ ರಾಜ್ ವ್ಯವಸ್ಥೆ ತಂದರು, ಇದು ಕಾಂಗ್ರೆಸ್ ಮಾಡಿದ್ದು ಎಂದರು.
5 ಸ್ಥಾನ ಗೆಲ್ಲುತ್ತೇವೆ- ಪಕ್ಷದ ಬದ್ದತೆಯಿದ್ದವರಿಗೆ ಟಿಕೇಟು ನೀಡಿದ್ದೇವೆ, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ, ಜನಪರ ನಾಯಕನನ್ನು ಸಿ.ಎಂ.ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮುಖಂಡರಾದ ದೋರನಾಳು ಪರಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಆರ್.ಮಂಜುನಾಥ್, ಮುಖಂಡರಾದ ಮಲ್ಲಿಕಾರ್ಜುನಪ್ಪ, ಈಶ್ವರಪ್ಪ ಮೊದಲಾದವರು ಮಾತನಾಡಿದರು,. ಪುರಸಭಾ ಸಗಸ್ಯರಾದ ಟಿ.ಎಸ್.ಧರ್ಮರಾಜ್, ಟಿ.ಎಸ್.ರಮೇಶ್, ಮಹೇಶ್, ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. ಆರ್.ಮಂಜುನಾಥ್ ಅವರು ಸ್ವಾಗತಿಸಿದರು., ಮೋಹನ್ಕುಮಾರ್ ಅವರು ನಿರೂಪಿಸಿದರು.