ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿಡಿಲಿನ ಆರ್ಭಟಕ್ಕೆ ಬೆದರಿದ ಜನತೆ

Lingaraj Badiger
Updated On : 30 Apr 2013, 11:08 am

ಚಿಕ್ಕಮಗಳೂರು: ನಡು ರಾತ್ರಿ ಎಲ್ಲರೂ ನಿದ್ದೆಗೆ ಜಾರಿದ್ದರು. ಆಗ ಇದ್ದಕ್ಕಿದ್ದಂತೆ ಗುಡುಗು, ಮಿಂಚು, ಸಿಡಿಲಿನ ಆರ್ಭಟ. ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಕೃತಿಯ ಈ ಚೆಲ್ಲಾಟ ಚಿಕ್ಕಮಗಳೂರು ಜನರನ್ನು ಭಾನುವಾರ ನಡು ರಾತ್ರಿ ಭಯದಲ್ಲಿ ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು.
ಭಾನುವಾರ ಸಂಜೆ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಆದರೆ, ಮಳೆ ಬರುವಷ್ಟು ಇರಲಿಲ್ಲ. ರಾತ್ರಿ 2.15ರ ವೇಳೆಗೆ ಬಲವಾಗಿ ಗಾಳಿ ಬೀಸಲು ಆರಂಭವಾಯಿತು. ಅಗ ಎಚ್ಚರ ಇದ್ದವರು ಮನೆಗಳು ಹಾರಿ ಹೋಗಬಹುದೆಂದು ಭಯಬೀತರಾದರು. ಇದರ ಜತೆ ಜತೆಗೆ ಮಳೆ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ತೀವ್ರವಾಯಿತು.  ಆಗ ಗಾಳಿ ಕಡಿಮೆಯಾಗಿ ಕೆಲ ಸಮಯ ಮಳೆ ಬಂದು ನಿಂತಿತು. ಆದರೆ, ಗುಡುಗು, ಮಿಂಚು ಮತ್ತು ಸಿಡಿಲು ಸುಮಾರು ಒಂದು ಗಂಟೆ ಕಾಲ ಮುಂದುವರೆದಿತ್ತು. ಕಿವಿಗಳು ಮುಚ್ಚಿದರೂ ಸಿಡಿಲಿನ ಅಬ್ಬರ ಆಗಾಗ ಕೇಳಿ ಬರುತ್ತಲೇ ಇತ್ತು. ಇದರಿಂದಾಗಿ ಇಡೀ ಚಿಕ್ಕಮಗಳೂರು ಜನತೆ ಎಚ್ಚರಗೊಂಡರು.
ಇಲ್ಲಿನ ಸಿರಿಗಪುರದಲ್ಲಿ ಮನೆಯೊಂದರ ಮೇಲೆ ಸಮೀಪದ ಮರ ಬಿದ್ದಿದ್ದು, ಮನೆಯಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅವರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಬಹುತೇಕ ಮಂದಿ ಗುಡುಗು, ಸಿಡಿಲಿನ ಆರ್ಭಟದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಕೆಲವರು ಈ ರೀತಿಯ ಸಿಡಿಲು ಹಿಂದೆಂದು ಕಂಡಿರಲಿಲ್ಲ ಎಂದು ಹೇಳುತ್ತಿದ್ದರು. ಒಟ್ಟಾರೆ, ಜನರಲ್ಲಿ ಸಿಡಿಲು ಆತಂಕ ಮೂಡಿಸಿತ್ತು.

ಜನರ ದಿಕ್ಕು ತಪ್ಪಿಸುವ ಹುನ್ನಾರ: ಜೀವರಾಜ್
ಶೃಂಗೇರಿ: ಐದು ವರ್ಷಗಳ ಬಿಜೆಪಿ ಆಳ್ವಿಕೆಯ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಪಪ್ರಚಾರಗಳಿಂದ ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಆರೋಪಿಸಿದರು.  ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ವಿಪಕ್ಷಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಲೇ ಬಂದಿತು. ಆದರೂ ಅಭಿವೃದ್ಧಿ ನಿಂತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement