ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೀರ ಭಾಗ್ಯಕ್ಕೆ ಚಾಲನೆ

Rashmi Kasaragodu
Updated On : 2 Aug 2013, 11:26 am

ಶಿಕಾರಿಪುರ: ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿಸದೆ ಆರೋಗ್ಯವಂತರನ್ನಾಗಿಸಲು ಸರ್ಕಾರ ಕ್ಷೀರ ಭಾಗ್ಯ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿದ್ದು, ಯೋಜನೆಯ ಸದುಪಯೋಗದ ಮೂಲಕ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸಿ ಅನಕ್ಷರತೆಯನ್ನು ಸಂಪೂರ್ಣ ತೊಡೆದುಹಾಕಲು ಪಣ ತೊಡಬೇಕಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಜಿ ವಸಂತಗೌಡ ತಿಳಿಸಿದರು. ಗುರುವಾರ ಪಟ್ಟಣದ ರಥಬೀದಿಯಲ್ಲಿನ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯನ್ವಯ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು. ಶಿಕ್ಷಕ ವರ್ಗ, ಸ್ಥಳೀಯ ಮುಖಂಡರು ಸರ್ಕಾರದ ಯೋಜನೆಗಳನ್ನು ಪೋಷಕರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement