ಮನ ತಣಿಸುವ ಜಲಧಾರೆ
ತರೀಕೆರೆ: ತಾಲೂಕಿನ ಕೆಮ್ಮಣಗುಂಡಿ, ಕಲ್ಲತ್ತಿಗರಿ, ತಣಿಗೇಬೈಲು ಗಿರಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎತ್ತರದ ಗುಡ್ಡ ಪ್ರದೇಶಗಳ ನಡುವೆ ಪ್ರಶಾಂತವಾಗಿ ಹರಿದು ಬರುವ ನೀರು ಸಮೀಪದ ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಆನೆಭುಜಗಳ ಎತ್ತರದಿಂದ ಧುಮುಕುವ ಜಲಧಾರೆಯನ್ನು ನೋಡಿದವರ ಮನ ತಣಿಯದಿರದು. ಎತ್ತರದಿಂದ ಜಲಧಾರೆ ಧುಮ್ಮಿಕ್ಕಿದರೂ ಪಿನ್ ಡ್ರಾಪ್ ಸೈಲೆನ್ಸ್ ಕಾಪಾಡುವ ಈ ಗಿರಿಧಾರೆ ಪ್ರಕೃತ್ತಿದತ್ತ ವಿಶೇಷತೆಯನ್ನು ಉಳಿಸಿಕೊಂಡಿದೆ. ಗಿರಿ ಜಲಧಾರೆ ದೂರದಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಕಲ್ಲತ್ತಿಗಿರಿ ಜಲಧಾರೆಗೆ ಆಗಮಿಸಿದರೆ, ಶ್ರೀ ವೀರಭದ್ರೇಶ್ವರಸ್ವಾಮಿಗೆ ಪೂಜೆ ಸಲ್ಲಿಸಬಹುದು ಜೊತೆಗೆ ನಯನಮನೋಹರ ಜಲಧಾರೆಯನ್ನು ಪ್ರವಾಸಿಗರು ವೀಕ್ಷಿಸಬಹುದು.
ಹಾಲಿನ ಹೊಳೆಯೋಪಾದಿಯಲ್ಲಿ ಕಾಣುವ ಗಿರಿಯ ಜಲಧಾರೆ ವೀಕ್ಷಿಸಲು ದಿನನಿತ್ಯ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.