ಇಂದು ನೂತನ ರೈಲು ಸಂಚಾರಕ್ಕೆ ಸಚಿವ ಖರ್ಗೆ ಚಾಲನೆ
ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾದ ನಂತರ ಇದೇ ಮೊದಲ ಬಾರಿ ನಗರಕ್ಕೆ ಆಗಮಿಸುತ್ತಿದ್ದು, ಆ.3ರಂದು 2.30ಕ್ಕೆ ನೈಋತ್ಯ ರೈಲ್ವೆ ಘಟಕವು ನೂತನವಾಗಿ ಆರಂಭಿಸಲಿರುವ ತಾಳಗುಪ್ಪ-ಶಿವಮೊಗ್ಗ- ತಾಳಗುಪ್ಪ (ಪ್ಯಾಸೆಂಜರ್) ರೈಲು ಮಾರ್ಗ ಹಾಗೂ ಮೈಸೂರು-ಶಿವಮೊಗ್ಗ- ಮೈಸೂರು (ಪ್ಯಾಸೆಂಜರ್) ರೈಲು ಸಂಚಾರಕ್ಕೆ ಚಾಲನೆ ನೀಡುವರು.
56218 ಸಂಖ್ಯೆಯ ರೈಲು ಮಧ್ಯಾಹ್ನ 1.45ಕ್ಕೆ ಶಿವಮೊಗ್ಗವನ್ನು ಬಿಟ್ಟು, 1.54ಕ್ಕೆ ಕೋಟೆಗಂಗೂರು 1.59ಕ್ಕೆ ಕೊನಗವಳ್ಳಿ, 2.09ಕ್ಕೆ ಹಾರನಹಳ್ಳಿ, 2.19ಕ್ಕೆ ಕುಂಸಿ, 2.39ಕ್ಕೆ ಅರಸಾಳು, 2.45ಕ್ಕೆ ಕೆಂಚನಾಲ, 3.19ಕ್ಕೆ ಆನಂದಪುರಂ, 3.29ಕ್ಕೆ ಅಡ್ಡೇರಿ, 3.59ಕ್ಕೆ ಸಾಗರ-ಜಂಬಗಾರು ಮಾರ್ಗವಾಗಿ 4.40ಕ್ಕೆ ತಾಳಗುಪ್ಪ ತಲುಪಲಿದೆ.
ಮೈಸೂರು ತಾಳಗುಪ್ಪ ನಡುವೆ ಸಂಚರಿಸುವ ಪ್ಯಾಸೆಂಜರ್ ವಿಸ್ತರಿಸಿದ ರೈಲಿನ ವೇಳಾಪಟ್ಟಿ ಇಂತಿದೆ. 56276 ಸಂಖ್ಯೆಯ ಮೈಸೂರು ತಾಳಗುಪ್ಪ ಪ್ಯಾಸೆಂಜರ್ ರೈಲು ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ಹೊರಟು ಅಂದು ರಾತ್ರಿ 10.15ಕ್ಕೆ ತಾಳಗುಪ್ಪ ತಲುಪಲಿದೆ. ಈ ರೈಲು ಸಂಚಾರ ಆ.3ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. 7.10ಕ್ಕೆ ಶಿವಮೊಗ್ಗದಿಂದ ಹೊರಡುವ ಮೈಸೂರು ತಾಳಗುಪ್ಪ ಪ್ಯಾಸೆಂಜರ್ ರೈಲು 7.29ಕ್ಕೆ ಕೋಟೆಗಂಗೂರು, 7.41ಕ್ಕೆ ಕೊನಗವಳ್ಳಿ, 7.47ಕ್ಕೆ ಹಾರನಹಳ್ಳಿ, 7.59ಕ್ಕೆ ಕುಂಸಿ, 8.17ಕ್ಕೆ ಅರಸಾಳು, 8.24ಕ್ಕೆ ಕೆಂಚನಾಳ, 8.44ಕ್ಕೆ ಆನಂದಪುರಂ, 8.59ಕ್ಕೆ ಅಡ್ಡೇರಿ, 9.24ಕ್ಕೆ ಸಾಗರ-ಜಂಬಗಾರು ಮಾರ್ಗವಾಗಿ 10.15ಕ್ಕೆ ತಾಳಗುಪ್ಪ ತಲುಪಲಿದೆ.
56275 ಸಂಖ್ಯೆಯ ರೈಲು ಬೆಳಿಗ್ಗೆ 5 ಗಂಟೆಗೆ ತಾಳಗುಪ್ಪವನ್ನು ಬಿಟ್ಟು 5.21ಕ್ಕೆ ಸಾಗರ-ಜಂಬಗಾರು, 5.47ಕ್ಕೆ ಅಡ್ಡೇರಿ, 6.09ಕ್ಕೆ ಆನಂದಪುರಂ, 6.22ಕ್ಕೆ ಕೆಂಚನಾಳ, 6.29ಕ್ಕೆಅರಸಾಳು, 6.50ಕ್ಕೆ ಕುಂಸಿ, 6.59ಕ್ಕೆ ಹಾರನಹಳ್ಳಿ, 7.06ಕ್ಕೆ ಕೊನಗವಳ್ಳಿ, 7.14ಕ್ಕೆ ಕೋಟೆಗಂಗೂರು ಮಾರ್ಗವಾಗಿ 7.40ಕ್ಕೆ ಶಿವಮೊಗ್ಗ ತಲುಪಲಿದೆ. ಈ ಸಂಚಾರ ಆ. 4ರಿಂದ ಆರಂಭಗೊಳ್ಳಲಿದೆ.
ರೈಲು ನಿಲ್ದಾಣದ ಬಳಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.