ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

565 ಮಂದಿಗೆ ವಸತಿ ಮನೆ ಇಲ್ಲ

Lingaraj Badiger
Updated On : 6 Aug 2013, 10:55 am

ಕ.ಪ್ರ.ವಾರ್ತೆ,  ಕೊಪ್ಪ, ಆ.5
ಶೃಂಗೇರಿ ಕ್ಷೇತ್ರ ಶಾಸಕ ಮತ್ತು ತಾಪಂ ಕಾರ್ಯನಿರ್ವಹಣಾಧಿಕರಿಗಳ ಬೇಜಾಬ್ದಾರಿತನದಿಂದ ತಾಲೂಕಿನ 565 ಮಂದಿ ವಸತಿ ರಹಿತರು ಮನೆ ಕಳೆದುಕೊಳ್ಳವಂತಾಗಿದೆ ಎಂದು ಬ್ಲಾಕ್ ಕಾಂಗ್ರೆಸ್  ಉಪಾಧ್ಯಕ್ಷ ಓಣಿತೋಟ ರತ್ನಾಕರ್ ಆರೋಪಿಸಿದ್ದಾರೆ.
ಈ ವಿಚಾರವಾಗಿ ಪತ್ರಿಕೆಗೆ ಮಾಹಿತಿ ನೀಡಿದ ಅವರು, ರಾಜೀವ್ ಗಾಂಧಿ ವಸತಿ ಯೋಜನೆಯಡಿ 2012-13ನೇ ಸಾಲಿಗೆ ತಾಲೂಕಿಗೆ 565 ಮಂದಿ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ತಲಾ 70 ಸಾವಿರದಂತೆ 4.32 ಕೋಟಿಯನ್ನು ರಾಜೀವ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿತ್ತು. ಆದರೆ ಫಲಾನುಭಾವಿಗಳ ಪಟ್ಟಿ ಸಿದ್ದಮಾಡಿ ನಿಗಮಕ್ಕೆ ಸಕಾಲದಲ್ಲಿ ಕಳುಹಿಸಿ ಕೊಡದೇ ಇದ್ದುದರಿಂದ ಅಷ್ಟೂ ಹಣ ಸರ್ಕಾರಕ್ಕೆ ವಾಪಸ್ಸು ಹೋಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಟ್ಟಿ ಕಳುಹಿಸಬೇಕಿತ್ತು: 2012 ಮೇ 19ರಂದು ರಾಜೀವ್ ಗಾಂಧಿ ವಸತಿ ನಿಗಮದಿಂದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಬಂದಿರುವ ಆದೇಶ ಪತ್ರದಲ್ಲಿ ತಾಲೂಕಿನಲ್ಲಿರುವ ವಸತಿ ರಹಿತರ ಪಟ್ಟಿಯನ್ನು ಜನವರಿ ತಿಂಗಳ ಒಳಗಾಗಿ ಸಿದ್ದಗೊಳಿಸಿ ವಸತಿ ನಿಗಮಕ್ಕೆ ಕಳುಹಿಸಿಕೊಡಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಪಂಗಳಲ್ಲಿ ಆಯ್ಕೆಮಾಡಿದ ಫಲಾನುಭವಿಗಳ ಪಟ್ಟಿಯನ್ನು ಡಿಸೆಂಬರ್ 2012ರೊಳಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ತಲುಪಿಸಬೇಕಿತ್ತು.
ಅದರಂತೆ ತಾಲೂಕಿನ 22 ಗ್ರಾಪಂಗಳಿಂದ ಆಯ್ಕೆ ಮಾಡಿದ 565 ಫಲಾನುಭವಿಗಳ ಪಟ್ಟಿಗಳನ್ನು ಕಾರ್ಯನಿರ್ವಹಣಾ ಅಧಿಕಾರಿ ನೀಡಲಾಗಿತ್ತು.
ನಂತರ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿರುವ ಜಾಗೃತಿ ಸಮಿತಿಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ ರಾಜೀವ್ ಗಾಂಧಿ ವಸತಿ ನಿಗಮ ಕಳುಹಿಸಿಕೊಡಬೇಕಿತ್ತು. ಮಾರ್ಚ್ ಅಂತ್ಯದೊಳಗೆ ಮನೆ ತಳಪಾಯದ ಬಿಲ್‌ಪಡೆದು  ಹಣ ಮಂಜೂರು ಮಾಡಬೇಕಿತ್ತು.
ಜಾಗೃತಿ ಸಭೆ: ಆದರೆ ದಾಖಲೆಗಳಲ್ಲಿ ಫೆ.20 ಕ್ಕೆ ಜಾಗೃತಿ ಸಮಿತಿ ಸಭೆ ನಡೆದಿದೆ. ಆದರೆ ಮಾರ್ಚ್ ಅಂತ್ಯದೊಳಗೆ ವಸತಿ ನಿಗಮಕ್ಕೆ ಕಳುಹಿಸಿಕೊಡಬೇಕಾಗಿದ್ದ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಅವಧಿಯೊಳಗೆ ಕಳುಹಿಸಲೇ ಇಲ್ಲ.
ತಾಪಂ ದಾಖಲೆಗಳ ಪ್ರಕಾರ 2013 ರ ಮೇ 25 ಕ್ಕೆ ಫಲಾನುಭವಿ ಪಟ್ಟಿಯನ್ನು ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿದೆ. ಅಷ್ಟರಲ್ಲಿ ಮಂಜೂರಾಗಿದ್ದ ಹಣ ವಾಪಸ್ಸು ಹೋಗಿದೆ. ಇದರಿಂದ ತಾಲೂಕಿನ 565 ಮಂದಿ ಬಡವರಿಗೆ ಅನ್ಯಾಯವಾಗಿದೆ. ಈ ಕುರಿತು ನಂತರ ಶಾಸಕರು ಹಾಗೂ ತಾಪಂ ಅಧ್ಯಕ್ಷರು ನಡೆಸಿದ ಪ್ರಗತಿ ಪರಿಶೀಲಾ ಸಭೆಗಳಲ್ಲೂ ಪ್ರಸ್ತಾಪ ಮಾಡದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement