ಲಲಿತ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ
ನರಸಿಂಹರಾಜಪುರ: ಅಗ್ರಹಾರದ ಲಲಿತ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಶೈಲಜಾ ನಾಗಭೂಷಣ್ ಹಾಗೂ ಕಾಯದರ್ಶಿಯಾಗಿ ಗಾಯತ್ರಿ ನಾಗರಾಜ್ ಆಯ್ಕೆಯಾಗಿದ್ದಾರೆ.
ಭಾನುವಾರ ಉಮಾ ಮಹೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶಾಂತಮ್ಮ ಅಧ್ಯಕ್ಷತೆಯಲ್ಲಿ ನಡೆದ ಲಲಿತಾ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಹಿಂದಿನ ಸಾಲಿನ ಅಧ್ಯಕ್ಷೆ ಚಂದ್ರಮತಿ ಹಾಗೂ ಕಾಯದರ್ಶಿ ಜಯಶ್ರೀ ಅವರು ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಲಲಿತಾ ಭಜನಾ ಮಂಡಳಿಯ ಮಾಜಿ ಕಾಯದರ್ಶಿ ಭಾಗ್ಯನಂಜುಂಡಸ್ವಾಮಿ ಅವರು ಸ್ನೇಹಿತರ ದಿನಾಚರಣೆ ಕುರಿತು ಮಾತನಾಡಿದರು. ವತ್ಸಲಾ ಭಾಸ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುನಂದಮ್ಮ ಪ್ರಾರ್ಥಿಸಿದರು. ಯಶೋದಮ್ಮ ಸ್ವಾಗತಿಸಿದರು. ರಾಜೇಶ್ವರಿ ರಾಮಚಂದ್ರ ವಂದಿಸಿದರು.
ವಿಜೇತರು: ಸವಿ ರುಚಿ ಸ್ಪರ್ಧೆ- ಪ್ರಥಮ ಲಕ್ಷ್ಮೀದೇವಮ್ಮ ನಾಡಿಗ್,ದ್ವಿತೀಯ ವತ್ಸಲಾ ಭಾಸ್ಕರ್, ಆರತಿ ತಟ್ಟೆ ಸ್ಪರ್ಧೆ- ಪ್ರಥಮ ಭಾಗ್ಯನಂಜುಂಡಸ್ವಾಮಿ, ದ್ವಿತೀಯ ಲಕ್ಷ್ಮಿನರಸಮ್ಮ, ತೃತೀಯ ಜ್ಯೋತಿ ರಮೇಶ್, ಬತ್ತಿ ತಯಾರಿಕೆ ಸ್ಪರ್ಧೆ- ಪ್ರಥಮ ಇಂದಿರಮ್ಮ, ದ್ವಿತೀಯ ವತ್ಸಲಾ ಭಾಸ್ಕರ್, ರಂಗೋಲಿ ಸ್ಪರ್ಧೆ- ಪ್ರಥಮ ಯಶೋದಮ್ಮ, ದ್ವಿತೀಯ ಜ್ಯೋತಿ ರಮೇಶ್, ಮೂಕಾಭಿನಯ ಸ್ಪರ್ಧೆ- ಪ್ರಥಮ ಕೆ.ಕೆ. ಲಕ್ಷ್ಮೀರಾವ್, ದ್ವಿತೀಯ ಎಚ್. ಲಲಿತಾ.