ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಡಿತರ ಚೀಟಿ ನವೀಕರಣ: 30ರ ವರೆಗೆ ತಡೆ- ಅಧಿಕಾರಿ

Vishwanath S
Updated On : 8 Aug 2013, 12:17 pm

ಚಿಕ್ಕಮಗಳೂರು: ಪಡಿತರ ಚೀಟಿಗಳ ನವೀಕರಣ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣದಿಂದಾಗಿ ಆ.30ರವರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಡಿಸೆಂಬರ್ 2010 ರ ಹಿಂದೆ ಖಾಯಂ ಪಡಿತರ ಚೀಟಿ ನೀಡುವ ಸಂದರ್ಭದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಬಯೋವುಟ್ರಿಕ್ ತಾಂತ್ರಿಕವಾಗಿ ದೋಷಪೂರಿತವಾಗಿದ್ದು, ಅದು ನಿಷ್ಪ್ರಯೋಜಕವಾಗಿತ್ತು. ಅದುದರಿಂದ ಇಲಾಖೆಯಿಂದ ನೇಮಿಸಲ್ಪಟ್ಟ ಸೇವಾ ಕೇಂದ್ರಗಳಲ್ಲಿ ಕುಟುಂಬ ಸದಸ್ಯರೆಲ್ಲರ ಬೆರಳಚ್ಚು ಬಯೋವುಟ್ರಿಕ್‌ಗಳನ್ನು ನೀಡಿ ಪಡಿತರ ಚೀಟಿಯನ್ನು ನವೀಕರಿಸಿಕೊಳ್ಳುವಂತೆ ಈ ಹಿಂದೆ ಸೂಚಿಸಲಾಗಿತ್ತು. ಅದರಂತೆ ಜಿಲ್ಲೆಯ ಹಲವು ಪಡಿತರ ಚೀಟಿದಾರರು ಅವರ ಪಡಿತರ ಚೀಟಿಗಳನ್ನು ನವೀಕರಿಸಿಕೊಂಡಿರುತ್ತಾರೆ ಹಾಗೂ ಇನ್ನು ಹಲವು ಪಡಿತರ ಚೀಟಿದಾರರು ಪಡಿತರ ಚೀಟಿಯನ್ನು ನವೀಕರಿಸಿಕೊಳ್ಳಲು ಬಾಕಿ ಇದ್ದು, ಪಡಿತರ ಚೀಟಿಗಳ ನವೀಕರಣ ಪ್ರಕ್ರಿಯೆ ಆಗಸ್ಟ್ 30 ರವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಎಸ್.ಎಂ.ಎಸ್: ನಗರ, ಪಟ್ಟಣ ಪ್ರದೇಶಗಳಲ್ಲಿ ಡಿಸೆಂಬರ್ 2010ರ ಹಿಂದೆ ಪಡೆದ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳದೆ ಇರುವವರು ಮೊಬೈಲ್ ಮೂಲಕ ಎಸ್.ಎಂ.ಎಸ್. ಕಳುಹಿಸಿ ಸೆಕ್ಯೂರಿಟಿ ಕೋಡ್ ಹಾಗೂ ಟೋಕನ್ ನಂಬರನ್ನು ಪಡೆದು ಸದರಿ ಮೆಸೇಜನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳತಕ್ಕದ್ದು. ತಪ್ಪಿದಲ್ಲಿ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ಸ್ಥಳಾಂತರ: ಒಂದೇ ಆಡಳಿತ ಮಂಡಳಿ ನಡೆಸುತ್ತಿರುವ ಪ್ರೌಢಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಿ ಇಲಾಖಾ ಅನುಮೋದನೆಗೆ ಆಗಸ್ಟ್ 10 ರಂದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು  ಶಿಕ್ಷಣ ಇಲಾಖೆ ತಿಳಿಸಿದೆ.
ತಾತ್ಕಾಲಿಕ ಪಟ್ಟಿ: ಆ.15 ರಂದು ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಖಾಲಿ ಹುದ್ದೆ ವಿವರವನ್ನು ಗುರುತ್ತಿಸಲಾಗುವುದು, 17 ರಂದು ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಿಸಿ ಆಕ್ಷೇಪಣೆಯನ್ನು ಆಹ್ವಾನಿಸಲಾಗುವುದು.
20 ರಂದು ಆಕ್ಷೇಪಣೆಗಳ ಪರಿಶೀಲನೆ ನಡೆಸಿ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. 22ರಂದು ಉಪ ನಿರ್ದೇಶಕರ ಹಂತದಲ್ಲಿ ಕೌನ್ಸಿಲಿಂಗ್ ನಡೆಸಿ ಸ್ಥಳಾಂತರಗೊಂಡ ಶಿಕ್ಷಕರಿಗೆ ಆದೇಶ ನೀಡಲಾಗುವುದು.
25 ರಂದು ಜಿಲ್ಲಾ ಹಂತದಲ್ಲಿ ಖಾಲಿ ಹುದ್ದೆಗಳ ಮರು ಹಂಚಿಕೆಯಾಗದೆ ಬಾಕಿ ಇರುವ ಹೆಚ್ಚುವರಿ ಶಿಕ್ಷಕರ ಪಟ್ಟಿ ಹಾಗೂ ಖಾಲಿ ಹುದ್ದೆ ಮಾಹಿತಿಯನ್ನು ನಿರ್ದೇಶಕರಿಗೆ ಕಳುಹಿಸಲಾಗುವುದು ಹಾಗೂ ಈ ಪಟ್ಟಿಯನ್ನು ಪರಿಶೀಲಿಸಿ ಹೆಚ್ಚುವರಿ ಶಿಕ್ಷಕರು ತಾತ್ಕಾಲಿಕ ಪಟ್ಟಿ ಆಕ್ಷೇಪಣೆಗಳನ್ನು ಆ.30 ರಂದು ಆಹ್ವಾನಿಸಿ, ಸೆ.9 ರಂದು ಅವುಗಳನ್ನು ಪರಿಶೀಲಿಸಿ ಅಂತಿಮ ಹೆಚ್ಚುವರಿ ಪಟ್ಟಿ ಪ್ರಕಟಿಸಲಿದ್ದಾರೆ ಹಾಗೂ ಸೆ.10 ರಂದು ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement