ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ
ಕ.ಪ್ರ.ವಾರ್ತೆ , ಮೂಡಿಗೆರೆ , ಆ.9
ಕಾಡಾನೆಗಳ ಹಾವಳಿ ಎಲ್ಲೆ ಮೀರಿದ್ದು ಕಾಫಿ ತೋಟ, ಗದ್ದೆಗಳನ್ನು ಹಾಳು ಮಾಡುತ್ತಿದ್ದು, ಲಕ್ಷಾಂತರ ರು. ನಷ್ಟವನ್ನುಂಟುಮಾಡುವುದರ ಜೊತೆಗೆ ಟ್ರಾನ್ಸ್ಫಾರ್ಮರ್ ಕಂಬವನ್ನು ಮುರಿದು ಹಾಕಿರುವ ಪ್ರಕರಣ ಸಮೀಪದ ಬಿದರಹಳ್ಳಿಯಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಒಂಟಿ ಸಲಗ ಸೇರಿದಂತೆ ನಾಲ್ಕು ಕಾಡಾನೆಗಳು ಬಿದರಹಳ್ಳಿಗೆ ಆಗಮಿಸಿ ಕಾಫಿ, ಅಡಕೆ, ಮೆಣಸು, ಏಲಕ್ಕಿ ಬಾಳೆಯನ್ನು ನಾಶಗೊಳಿಸಿ ಕಂಬವನ್ನು ನೆಲಕ್ಕುರುಳಿಸಿ ದಾಂಧಲೆ ನಡೆಸಿವೆ.
ಬೆಳೆಗಾರ ಬಿ.ಎಸ್. ಜಯರಾಮ್ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾನೆಗಳು ಪಟ್ಟಣದತ್ತ ಮುಖ ಮಾಡುತ್ತಿವೆ. ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ ಮೂಡಿಗೆರೆಯಲ್ಲಿ ಆನೆಗಳೇ ಇಲ್ಲ ಎಂಬ ಉತ್ತರ ಬಂದಿದ್ದು. ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಅರಣ್ಯ ಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.