ಗದ್ದೆಗೆ ನುಗ್ಗಿದ ಬಸ್ಸು: ನಾಲ್ವರಿಗೆ ಗಾಯ
ಕ.ಪ್ರ.ವಾರ್ತೆ , ಮೂಡಿಗೆರೆ , ಆ.9
ಮೂಡಿಗೆರೆಯಿಂದ ಬಣಕಲ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕರಾರಸಂಸ್ಥೆಯ ವಾಹನ ಚಾಲಕನ ಹತೋಟಿ ತಪ್ಪಿ ಗದ್ದೆಗೆ ಇಳಿದಿದ್ದರ ಪರಿಣಾಮ ನಾಲ್ವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಬಣಕಲ್‌ನಲ್ಲಿ ಶುಕ್ರವಾರ ನಡೆದಿದೆ.
ಹರಪನಹಳ್ಳಿ ಘಟಕಕ್ಕೆ ಸೇರಿದ ಬಸ್ಸು ಮೂಡಿಗೆರೆ-ಬಣಕಲ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಬಣಕಲ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಗದ್ದೆಗೆ ನುಗ್ಗಿತು.
ಬಸ್ ಪ್ರಯಾಣಿಕರಾದ ತಿಮ್ಮಪ್ಪ, ವಿಶ್ವನಾಥ್, ಬಸಪ್ಪ ಮತ್ತು ಸತೀಶ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಯಿತು. ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.