ಭವಿಷ್ಯನಿಧಿ ಅದಾಲತ್
ಚಿಕ್ಕಮಗಳೂರು: ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಿಂದ ಆ. 12 ರಂದು ನಗರದ ಯಶೋರಾಮ್ ಛೇಂಬರ್ಸ್, ರತ್ನಗಿರಿ ರಸ್ತೆಯ ಉಪ ಕ್ಷೇತ್ರೀಯ ಕಚೇಕೇರಿಯಲ್ಲಿ ಭವಿಷ್ಯನಿಧಿ ಅದಾಲತ್ನ್ನು ಆಯೋಜಿಸಲಾಗಿದೆ.
ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ಅಂಚೆ ಮೂಲಕ ಆ. 10 ರೊಳಗೆ ನೋಂದಾಯಿಸಿಕೊಳ್ಳಬಹುದು. ಭವಿಷ್ಯನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಘಂಟೆಯೊಳಗೆ ಜಮಾ ಮಾಡಲು ಎನ್ಇಎಫ್ಟಿ, ಸಿಬಿಎಸ್ ಸೌಲಭ್ಯವನ್ನು ಒದಗಿಸಲಾಗಿದ್ದು, ಸದಸ್ಯರು ತಮ್ಮ ಅರ್ಜಿಯ ಜೊತೆಗೆ ಬ್ಯಾಂಕ್ ಪುಸ್ತಕದ ನಕಲು ಲಗತ್ತಿಸಬೇಕಾಗಿದೆ. ಮಾಹಿತಿಗಾಗಿ ಸಹಾಯಕ ಭವಿಷ್ಯನಿಧಿ ಆಯುಕ್ತರ ಕಚೇರಿ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ತಿಳಿಸಿದೆ.