ಯೋಜನೆ ಸದುಪಯೋಗಕ್ಕೆ ಮನವಿ
ಕ.ಪ್ರ.ವಾರ್ತೆ , ನ.ರಾ.ಪುರ ,ಆ.9
ಸರ್ಕಾರವು ವಿವಿಧ ಯೋಜನೆಗಳಿಗಾಗಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯ ಧನವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ಶೆಟ್ಟಿಕೊಪ್ಪ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ. ಉದಯಕರ್ ಕರೆ ನೀಡಿದರು.
ಅವರು ಗುರುವಾರ ಶೆಟ್ಟಿಕೊಪ್ಪದ ಜಲ ಸಂವರ್ದನಾ ಯೋಜನಾ ಸಂಘದ ಕಚೇರಿಯ ಆವರಣದಲ್ಲಿ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ವ್ಯಾಪ್ತಿಯ 7 ವಿವಿಧ ಸ್ವಸಹಾಯ ಸಂಘಗಳಿಗೆ ತಲಾ 15 ಸಾವಿರ ಸಹಾಯ ಧನದ ಚೆಕ್ ವಿತರಿಸಿ ಮಾತನಾಡಿದರು. ಸಮುದಾಯ ಆಧಾರಿತ ಆದಾಯೋತ್ಪನ್ನ ಚಟುವಟಿಕೆಗಳಿಗೆ ಈ ಸಹಾಯ ಧನವನ್ನು ನೀಡಲಾಗಿದೆ. ಸ್ವಸಹಾಯ ಸಂಘದ ಅಭಿವೃದ್ಧಿಗೆ ಅಥವಾ ವೈಯಕ್ತಿಕವಾಗಿಯೂ ಈ ಸಹಾಯಧವನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವೆಂಕಟೇಶ್ವರ ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ಕೆ.ಟಿ. ಸುರೇಂದ್ರ, ಖಜಾಂಚಿ ಶೈನಿ ಯಹನಾನ್, ಸದಸ್ಯರಾದ ಬಿ.ಕೆ. ರವೀಂದ್ರ, ಎ.ಬಿ. ಚಂದ್ರಶೇಖರ್, ಎಂ. ಮಹೇಶ್ ಉಪಸ್ಥಿತರಿದ್ದರು.