ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ: ದತ್ತ

Vishwanath S
Updated On : 11 Aug 2013, 12:29 pm

ಕ.ಪ್ರ.ವಾರ್ತೆ  ,  ಬೀರೂರು  ,   ಆ.10
ಅರವತ್ತು ವರ್ಷದ ರಾಜಕೀಯದ ಇತಿಹಾದಲ್ಲಿ ಜಾತಿ, ವರ್ಗ, ಹಣದ ರಾಜಕಾರಣಕ್ಕೆ ಕಡಿವಾಣ ಹಾಕಿ ಜಾತ್ಯತೀತ ಮೌಲ್ಯಕ್ಕೆ ಪ್ರಾಧಾನ್ಯತೆ ನೀಡಿರುವ ಕಡೂರು ಕ್ಷೇತ್ರದ ಎಲ್ಲ ಜನಾಂಗದ ಮತದಾರರ ಋುಣ ತೀರಿಸುವ ಗುರುತರ ಜವಬ್ದಾರಿ ನನ್ನ ಮೇಲಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸಂಜೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, 6 ವರ್ಷದ ಹಿಂದೆ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟು ಎರಡು ಭಾರಿ ಪರಾಭವಗೊಂಡರೂ  ಈ ಭಾರಿ ಕ್ಷೇತ್ರದ ಮತದಾರ ಪ್ರಭುಗಳು ತಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದರು.
ಭ್ರಮೆ ನನ್ನಲಿಲ್ಲ: ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಜವಬ್ದಾರಿ ನನಗಿದೆ. ಇಂದು  ಶಂಕುಸ್ಥಾಪನೆ, ನಾಳೆ ಉಧ್ಘಾಟನೆ ಮಾಡಿದ ದೊಡ್ಡ ಸಾಧನೆ ಮಾಡುತ್ತೇನೆ ಎಂಬ ಭ್ರಮೆ ನನ್ನಲಿಲ್ಲ. ಆದ್ಯತೆ ಮೇಲೆ ಕ್ಷೇತ್ರದ  ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದಿನದ 18 ಗಂಟೆ ಕಾಲ ಕ್ಷೇತ್ರದ ಅಭಿವೃದ್ದಿಗೆ ಕಾಳಜಿ ವಹಿಸುತ್ತೇನೆ ಎಂದರು.
ಸಂಸ್ಕೃತಿ ಮತ್ತು ಸಂಸ್ಕಾರಗಳ ಜೊತೆ ಕೆಲಸ ಹಾಗು ಸಾಧನೆ, ಹಟ ಸರಳತೆಯ ವಿಧಾನವು ನನ್ನ ಬಾಲ್ಯದ ಗುರುಗಳಿಂದ ಕಲಿತ ಪಾಠವಾಗಿದೆ. ಬ್ರಾಹ್ಮಣ ಜನಾಂಗದ ಗೌರವಕ್ಕೆ ಚ್ಯುತಿ ಬಾರದ ರೀತಿ ರಾಜಕೀಯ ಮಾಡಿ ಕ್ಷೇತ್ರದ ಜನರ ಸೇವೆ ಮಾಡುವುದಾಗಿ ಹೇಳಿದರು.
ಜಿ.ಪ.ಸದಸ್ಯ ಬಿ.ಪಿ.ನಾಗರಾಜ್ ಮಾತನಾಡಿ, ಕ್ಷೇತ್ರದ ಜನರ ನಾಡಿ ಮಿಡಿತ ಅರಿತು ಕಳೆದ ಏಳು ವರ್ಷದಿಂದ ದತ್ತರವರು ಶ್ರಮಿಸಿದ್ದಾರೆ. ಕ್ಷೇತ್ರದ ಎಲ್ಲ ಸಮುದಾಯಗಳೊಂದಿಗೆ ಸಹೋದರರಂತೆ ಬೆರೆತು ಜಾತಿ ಪದ್ದತಿಗೆ ತಿಲಾಂಜಲಿ ಇಟ್ಟು ನೈಜ ರಾಜಕಾರಣ ಬಯಸುವವರಿಗೆ ರಾಜಕೀಯ ಗುರುವಾಗಿ ನಮ್ಮೆದುರಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಲು ಸ್ಲೀಪರ್ ವ್ಯವಸ್ಥಾಪಕ ವೆಂಕಟೇಶ್ ಒಡೆಯರ್ ಮಾತನಾಡಿ, ಅಲ್ಪ ಜನಸಂಖ್ಯೆ ಹೊಂದಿರುವ ಸಮದಾಯದ ದತ್ತಾರವರನ್ನು ಜನರು ಈ ಭಾರಿ ಚುನಾಯಿಸಿ ಕ್ಷೇತ್ರದ ರಾಜಕೀಯ ಮೌಲ್ಯದ ಹಿರಿಮೆಯನ್ನು ರಾಜ್ಯಕ್ಕೆ ಪಸರಿಸಿದ ಕೀರ್ತಿಗೆ ಪಾತ್ರಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಂ.ವಿ. ಕೃಷ್ಣಮೂರ್ತಿ, ದೇವಾಲಯದ ಗೌರವಾಧ್ಯಕ್ಷ ಶಿವರಾಮಶಾಸ್ತ್ರಿ, ಶಿವಮೊಗ್ಗದ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್, ಕೃಷ್ಣಮೂರ್ತಿ, ಮಹಾಬಲರಾವ್, ಕುಮಾರಸ್ವಾಮಿ,ನಟರಾಜ್, ಶೇಷಾದ್ರಿ ಜಯಲಕ್ಷ್ಮೀ, ಮಹಾಬಲರಾವ್,ಕೃಷ್ಣಪ್ರಸಾದ್ ಪಾಲ್ಗೊಂಡಿದದು.
 ಜ್ಯೋತಿ ಅನಂತ್ ಪ್ರಾರ್ಥಿಸಿದರು. ಸೋಮಶೇಖರ್ ಸ್ವಾಗತಿಸಿದರೆ, ಕೃಷ್ಣಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement