ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡಿವೈಎಸ್ಪಿ ರವಿಪ್ರಕಾಶ ಅಂತ್ಯ ಸಂಸ್ಕಾರ

Vishwanath S
Updated On : 11 Aug 2013, 12:29 pm

ಕ.ಪ್ರ.ವಾರ್ತೆ , ಶಿರಾಳಕೊಪ್ಪ  ,   ಆ.10
ಹೊಳೆಹೊನ್ನೂರು ಸಮೀಪ ಶುಕ್ರವಾರ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್ಪಿ ರವಿಪ್ರಕಾಶ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಾದ ಉಡಗಣಿ ಗ್ರಾಮದಲ್ಲಿ ನಡೆಯಿತು.
ರವಿಪ್ರಕಾಶ ಅವರ ನಿಧನದಿಂದಾಗಿ ಇಡೀ ಉಡಗಣಿ ಗ್ರಾಮವೇ ಶೋಕ ಸಾಗರದಲ್ಲಿ ಮುಳಗಿತ್ತು.
ಅಂತಿಮ ದರ್ಶನಕ್ಕೆ ಹರಿದು ಬಂದ ಜನ: ಉಡಗಣಿ ಗ್ರಾಮದಲ್ಲಿ ರವಿಪ್ರಕಾಶ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಂದ ಆಗಮಿಸಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳು, ಸ್ನೇಹಿತರು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.
ಸಂಸದ ಬಿವೈ ರಾಘವೇಂದ್ರ, ಜಿಲ್ಲಾ ಅಡಿಷನಲ್ ಎಸ್ಪಿ ಬಿ.ದಯಾಳ, ಡಿವೈಎಸ್ಪಿ ಮಂಜುನಾಥ, ಸಿಪಿಐ ಮಾದಪ್ಪ ಎಸ್‌ಐ ಗುರುಪ್ರಸಾದ್ ಹಾಗೂ ಸಿಬ್ಬಂದಿ ಪುಷ್ಪಹಾರ ಹಾಕಿ ಗೌರವ ಸಲ್ಲಿಸಿದರು.
ಮಧ್ಯಹ್ನ 1ಗಂಟೆಗೆ ಪಾರ್ಥಿವ ಶರೀರವನ್ನು ಗ್ರಾಮದ ಹೊರವಲಯದ ರುದ್ರ ಭೂಮಿಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಗೌರವ ಅರ್ಪಣೆ ಮಾಡಿ ಮೂರು ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಪಾರ್ಥಿವ ಶರೀರ ಪಂಚಭೂತದಲ್ಲಿ ಲೀನವಾಯಿತು.
ಮೃತ ರವಿ ಪ್ರಕಾಶ್ ತಂದೆ ಕರಿಬಸಪ್ಪ, ತಾಯಿ ಸೇರಿದಂತೆ ಸಹೋದರರು ಹಾಗೂ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement