ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಶ್ಚಿಮ ಘಟ್ಟ: ಜೀವ ವೈವಿಧ್ಯತೆ ತಾಣ

Vishwanath S
Updated On : 11 Aug 2013, 12:30 pm

ನರಸಿಂಹರಾಜಪುರ: ಪಶ್ಚಿಮ ಘಟ್ಟದಲ್ಲಿ ವಿಶಿಷ್ಟ ಜೀವ ವೈವಿಧ್ಯತೆ ಇದ್ದು ಇದನ್ನು ಸಂರಕ್ಷಿಸಲು ಎಲ್ಲರೂ ಪಣ ತೊಡಬೇಕಾಗಿದೆ ಎಂದು ಎಸ್‌ಐಆರ್‌ಡಿ ಸಂಸ್ಥೆಯ ಮುಖ್ಯಸ್ಥ ವೆಂಕಟೇಶ್ ತಿಳಿಸಿದರು.
ಅವರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಸೇವಾ ಸಂಸ್ಥೆ ಮತ್ತು ರೇಮೋಸ್ ಯುವ ತಂಡದ ಆಶ್ರಯದಲ್ಲಿ ನಡೆದ ಜನತಾ ಜೀವ ವೈವಿಧ್ಯತಾ ಕಾರ್ಯ ಚಟುವಟಿಕೆ, ಪುಸ್ತಕ ವಿತರಣೆ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಮಾಹಿತಿ ನೀಡಿದರು.
ಭಾರತೀಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಸ್.ಆರ್.ಕಾಳೇಗೌಡ ಮಾತನಾಡಿ, ಪರಿಶರ ನಾಶದಿಂದಾಗಿ ಅಮೂಲ್ಯ ಜೀವ ವೈವಿಧ್ಯತೆ ನಾಶವಾಗುತ್ತಿದೆ. ಅಮೂಲ್ಯ ಸಸ್ಯ ಸಂಪತ್ತು ವಿನಾಶದ ಅಂಚಿನಲ್ಲಿದೆ.ಮುಂದಿನ ಯವ ಪೀಳಿಗೆಯವರು ಇದನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರ್ವಮಂಗಳಮ್ಮ ವಹಿಸಿದ್ದರು. ಸಭೆಯಲ್ಲಿ ವಿಜ್ಞಾನ ಉಪನ್ಯಾಸಕ ಅನಂತ ಪದ್ಮನಾಭ, ರೇಮೋಸ್ ತಂಡದ ಸದಸ್ಯರಾದ ಕೌಸಿಕ್, ವೇಣುಗೋಪಾಲ್, ಶ್ರೀನಾಗ್, ಸುದರ್ಶನ್, ವಿಕಾಸ್, ಪ್ರಣಮ್,ಶ್ರೀಕಾಂತ್, ರವೀಂದ್ರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಗತ್ಯವಾದ ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಅವಶ್ಯಕವಾದ ಪುಸ್ತಕಗಳನ್ನು ವಿತರಿಸಲಾಯಿತು. ಪಿ.ಯು.ಸಿ. ವ್ಯಾಸಂಗದ ನಂತರ ಮಾಡಬಹುದಾದ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement