ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೆಸವಳಲು ಡಾಟ್ ಕಾಂ ಕಚೇರಿ ಉದ್ಘಾಟನೆ

Lingaraj Badiger
Updated On : 14 Aug 2013, 11:00 am

ಕ.ಪ್ರ.ವಾರ್ತೆ, ಮೂಡಿಗೆರೆ,  ಆ.13
ತುರ್ತಾಗಿ ವಿದೇಶ, ಹೊರ ರಾಜ್ಯಗಳಿಗೆ ಹೋಗಬೇಕಾದರೆ ಸಾರ್ವಜನಿಕರು ಇದುರವೆಗೆ  ಬೆಂಗಳೂರಿನಂತ ನಗರಗಳಿಗೆ ಹೋಗಿ ರೈಲು, ವಿಮಾನ, ಟಿಕೆಟ್ ಪಡೆಯಬೇಕಾಗಿತ್ತು. ಆದರೆ ಇನ್ನು ಮುಂದೆ ರೈಲು ಮತ್ತು ವಿಮಾನ ಟಿಕೆಟಟ್ಪಡೆಯಲು ಜಿಲ್ಲೆ ಅಥವಾ ನಗರ ಪ್ರದೇಶಗಳಿಗೆ ಹೋಗುವ ಬದಲಾಗಿ ತಾಲೂಕಿನಲ್ಲೆ ಸೇವೆಯನ್ನು ಪಡೆಬಹುದು ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಪಟ್ಟಣದ ಹೆಸಗಲ್ ಗ್ರಾಪಂ ಸಮೀಪದಲ್ಲಿ ಆರಂಭಗೊಂಡ ಕೆಸವಳಲು.ಕಾಂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರಾಣೇಶ್ ಮಾತನಾಡಿ, ಇಂದು ಕೆಲವು ಖಾಸಗಿ ಕಂಪೆನಿಗಳು ಲಾಭವನ್ನು ಮಾತ್ರ ಯೋಚಿಸುತ್ತವೆ. ಆದರೆ ಕೆಸವಳಲು.ಕಾಂ ಸರ್ಕಾರ ನಿಗದಿಪಡಿಸಿದ ದರದಲ್ಲೇ ಪಾನ್ ಕಾರ್ಡ್ ಮಾಡಿಕೊಡುತ್ತಿರುವುದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದೇ ರೀತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಯನ್ನು ಒದಗಿಸುವಂತೆ ತಿಳಿಸಿದರು.
ಉತ್ತಮ ಸೇವೆ: ಮಾಲೀಕ ರಾಘವೇಂದ್ರ ಕೆ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು, ಮೈಸೂರು,  ಮಂಗಳೂರು, ಚಿಕ್ಕಮಗಳೂರಿನಲ್ಲಿ ಕೆಸವಳಲು.ಕಾಂ ಉತ್ತಮ ಸೇವೆ ಒದಗಿಸುತ್ತಿದ್ದು, ಈಗ ಮಲೆನಾಡಿನ ತವರೂರಾದ ಮೂಡಿಗೆರೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಚೇರಿ ತೆಗೆಯಲಾಗಿದೆ. ಹೋಂಸ್ಟೇ, ಎಲ್ಲಾ ವಿಮಾನ ಟಿಕೇಟ್, ರೇಲ್ವೆ, ಬಸ್ ಟಿಕೆಟ್‌ಗಳು, ಪಾಸ್‌ಪೋರ್ಟ್, ವಿಸಾ, ಪ್ರವಾಸ ಪ್ಯಾಕೇಜ್, ಹೋಟೆಲ್ ಬುಕ್ಕಿಂಗ್, ಹೋಮ್ ಲೋನ್ ಸೌಲಭ್ಯಗಳನ್ನುಒದಗಿಸಲಾಗುವುದು ಎಂದರು.
ರಾಜೇಗೌಡ, ಭಾನುಪ್ರಕಾಶ್ ಡಿ.ಆರ್. ಉಮಾಪತಿ, ಕೆ.ಕೆ. ಸತೀಶ್, ರಾಧ ಪುಟ್ಟಸ್ವಾಮೇ ಗೌಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement