ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಹಾರ ಚೆಕ್ ವಿತರಣೆ

Lingaraj Badiger
Updated On : 14 Aug 2013, 11:01 am

ಬಾಳೆಹೊನ್ನೂರು: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸಮೀಪದ ಜಕ್ಕಣಕ್ಕಿ ತೆಪ್ಪದಗಂಡಿ ಬಳಿ ಭದ್ರಾನದಿ ಪ್ರವಾಹದಲ್ಲಿ ಮುಳುಗಿ ಮರಣ ಹೊಂದಿದ ಜುಲ್ಫೀಕರ್ ಅವರ ಕುಟುಂಬಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರು ವಿಪತ್ತು ಪರಿಹಾರ ನಿಧಿಯಿಂದ 1.5 ಲಕ್ಷ ರು.ಗಳ ಚೆಕ್ ವಿತರಿಸಿದರು.
ಜುಲ್ಫೀಕರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾಗಿದ್ದು, ಬಾಳೆಹೊನ್ನೂರು ಸಮೀಪದ ಮಾಗುಂಡಿಯ ತನ್ನ ಪತ್ನಿ ಮನೆಗೆ ತೆರಳುವ ಸಂದರ್ಭ ಈ ದುರ್ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಡಿ.ಎನ್. ಜೀವರಾಜ್ ಮಾಗುಂಡಿಯ ಅಸ್ಮತ್ ಅವರ ಮನೆಗೆ ತೆರಳಿ ಪರಿಹಾರದ ಚೆಕ್ ವಿತರಿಸಿದರು.
ಮಹಮ್ಮದ್ ಇಫ್ತೆಖಾರ್ ಆದಿಲ್, ಭಾಸ್ಕರ್ ವೆನಿಲ್ಲಾ, ಕೆ.ಟಿ. ವೆಂಕಟೇಶ್, ಕೆ.ಕೆ. ವೆಂಕಟೇಶ್, ಮೋಹನ್, ಗ್ರಾಮಲೆಕ್ಕಿಗ ಸೋಮಶೇಖರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement