ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಕೃತಿ ಮಾರಕ ಯೋಜನೆಗೆ ವಿರೋಧ: ವಿದ್ಯಾಪ್ರಸನ್ನಶ್ರೀ

Mainashree
Updated On : 14 Aug 2013, 12:15 pm

ಸುಬ್ರಹ್ಮಣ್ಯ: ಸಮಗ್ರ ಕರಾವಳಿ ಜಿಲ್ಲೆಗಳು ತೀವ್ರ ಚಟುವಟಕೆಯಿಂದ ಕೂಡಿದ  ಭೌಗೋಳಿಕ ಭೂ ಪ್ರದೇಶ. ಇಲ್ಲಿ ಪ್ರಕೃತಿಗೆ ವಿರುದ್ಧವಾದ ಮಾರಕ ಯೋಜನೆಗಳನ್ನು ಜಾರಿಗೊಳಿಸಲು ನಮ್ಮ ವಿರೋಧವಿದೆ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ನುಡಿದರು.
ಕರಾವಳಿ ಜಿಲ್ಲೆಯ ಕೃಷಿಕರಿಗೆ ಹಾನಿಯಾಗುವ ಮಾರಕ ಯೋಜನೆಗಳ ವಿರುದ್ಧ ಧ್ವನಿ ಎತ್ತಿದ ಕುಮಾರಧಾರ ಸಂರಕ್ಷಣಾ ಹೋರಾಟ ಸಮಿತಿಗೆ ಬೆಂಬಲ ವ್ಯಕ್ತಪಡಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಪಂಚದಲ್ಲಿ ಪ್ರಕೃತಿ ವಿರುದ್ಧ ಹೋರಾಡಿ ಜಯಗಳಿಸಲು ಯಾರಿಗೂ ಆಗುವುದಿಲ್ಲ. ಜನವಿರೋಧಿ ಯೋಜನೆಗಳು ಮುಂದಿನ ಜನಾಂಗಕ್ಕೆ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿದೆ. ವಿದೇಶದಲ್ಲಿ ವಿವಿಧ ಯೋಜನೆ ಮಾಡಿ ಕೈಬಿಟ್ಟಿದ್ದಾರೆ. ಆದರೆ ಪ್ರಕೃತಿ ನಿರ್ಮಿಸಲು ಆಗಲಿಲ್ಲ. ಈ ಕಾರಣದಿಂದ ಆರಂಭದಿಂದಲೇ ಪರಿಸರ ಹಾಗೂ ಜೀವರಕ್ಷಣೆಯ ಉದ್ದೇಶ ಹೊಂದಿರದ ಯೋಜನೆಗಳನ್ನು ವಿರೋಧಿಸಬೇಕೆಂದರು.
ಹಾನಿಯೇ ಜಾಸ್ತಿ: ಬಹುತೇಕ ಯೋಜನೆಯಿಂದ ಲಾಭಕ್ಕಿಂತ ಹಾನಿಯೇ ಜಾಸ್ತಿಯಾಗಿದ್ದು, ದೀರ್ಘಕಾಲದ ನಷ್ಟವಾಗಿದೆ. ಪಶ್ಚಿಮ ಘಟ್ಟಗಳ ಯೋಜನೆ ಬಗ್ಗೆ ಪರಿಸರ ತಜ್ಞರು ಸಾಧಕ ಭಾದಕಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಯೋಜನೆ ಕಾರ್ಯಗತಗೊಳಿಸಿದರೆ ಕರಾವಳಿ ಜಿಲ್ಲೆಗಳಿಗೆ ಮಾರಕವಾಗಲಿದೆ ಎಂದು ವರದಿ ಸಲ್ಲಿಸಿದ್ದಾರೆ. ನಾಗಾಲಯ, ದೇವಾಲಯ, ದೈವಾಲಯಗಳು ಜಿಲ್ಲೆಯ ಪರಿಸರದೊಂದಿಗೆ ಹೊಂದಿಕೊಂಡಿವೆ. ಎಷ್ಟು ಮಾತ್ರಕ್ಕೂ ಯಾವುದೇ ಯೋಜನೆಗಳು ಕಾರ್ಯಗತಗೊಳಿಸಬಾರದು. ಮುಂದಿನ ಜನಾಂಗಕ್ಕೆ ಹಾಗೂ ಜೀವರಕ್ಷಣೆಗಾಗಿ ಬೇಕಾದ ಈ ಪರಿಸರಕ್ಕೆ ಹಾನಿಯಾಗದಂತೆ ರಕ್ಷಿಸುವ ಹೋರಾಟಕ್ಕೆ ಬೆಂಬಲಿಸುವುದಾಗಿ ಸ್ವಾಮೀಜಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement