ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಡೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Lingaraj Badiger
Updated On : 16 Aug 2013, 10:58 am

ಕಡೂರು: ಬ್ರಿಟೀಷರಿಗೆ ಹೋಲಿಸಿದರೆ ದೇಶದ ಸಂಕಷ್ಟ ಅರಿಯದ ರಕ್ಕಸರಿಗೆ ದೇಶವನ್ನು ನೀಡಲಾಗಿದೆಯೇ ಎಂಬ ಅನುಮಾನ ಮೂಡುತ್ತಿರುವುದು ವಿಷಾದನೀಯ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
 ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 67 ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಭೋಸ್ ಮತ್ತಿತರ ನಾಯಕರ ತ್ಯಾಗ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯತಂದು ಕೊಟ್ಟರು. ಆದರೆ ಅವರು ತಂದುಕೊಟ್ಟ ಸ್ವಾತಂತ್ರ್ಯದ ನಿರೀಕ್ಷೆ ಸುಳ್ಳಾಗಿ ಜನರು ಸಂಕಷ್ಟದ ಸ್ಥಿತಿಯಲ್ಲಿಯೇ ಬದುಕುತ್ತಿದ್ದಾರೆ ಎಂದರು.
 ಗ್ರಾಮಾಂತರ ಪ್ರದೇಶಗಳ ಜನರು ಅಜ್ಞಾನ, ಅನಕ್ಷರತೆ ತೊಡೆದು ಹಾಕಿ ಸ್ವಾವಲಂಬಿಗಳಾಗಿ ಬದುಕಲು ಕಲಿಯಬೇಕು. ದೇಶದ ಪ್ರತಿಯೊಬ್ಬ ಯುವಕರು ದೇಶದ ಸತ್ಪ್ರಜೆಗಳಾಗಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ಕೀಕರಿಸಿದ ತಾಲೂಕು ದಂಡಾಧಿಕಾರಿ ಎನ್.ಎಸ್. ಶಾರದಾಂಬ ಮಾತನಾಡಿ, ದೇಶದ ಆಧಾರ ಸ್ತಂಭಗಳು ಯುವ ಸಮೂಹವಾಗಿದ್ದು, ಅಪಾರ ಬೆಲೆ ತೆತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೇವೋಜಿರಾವ್, ಗಂಗೋಜಿರಾವ್, ಕಾಂತರಾಜಶೆಟ್ಟಿ, ಚಂದ್ರಶೇಖರ್‌ರವರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಗೌರವಿಸಲಾಯಿತು.
ತಾಪ ಅಧ್ಯಕ್ಷ ಓಂಕಾರಪ್ಪ, ಪುರಸಭಾ ಮುಖ್ಯಾಧಿಕಾರಿ ಕುಮಾರನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳಾದ ರಂಗನಾಥ್, ಸಂಜಯ್, ಶಿವಣ್ಣ, ಓಂಕಾರಪ್ಪ, ಡಾ.ಎಸ್.ಕೆ. ಪ್ರಭು,ಪ್ರಕಾಶಮೂರ್ತಿ, ಮಹೇಶ್ವರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement