ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಗ್ರಾಮೀಣ ಕ್ರೀಡೆ ಉಳಿಸಿ'

Lingaraj Badiger
Updated On : 17 Aug 2013, 10:55 am

ಕ.ಪ್ರ.ವಾರ್ತೆ, ಬಾಳೆಹೊನ್ನೂರು,  ಆ.16
ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಎನ್.ಆರ್.ಪುರ ರಸ್ತೆಯ ಸೈಯ್ಯದ್ ಶಬ್ಬೀರ್ ಅವರ ಗದ್ದೆಯಲ್ಲಿ ಗುರುವಾರ ಆಯೋಜಿಸಿದ್ದ ಉಲ್ಲಾಸ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಮೈನವಿರೇಳಿಸಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜೇಸಿ ಅಧ್ಯಕ್ಷ ಮಂಜುನಾಥ್ ತುಪ್ಪೂರು ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡಾಕೂಟಗಳು ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಉಳಿಸುವ ಯತ್ನವನ್ನು ತಮ್ಮ ಸಂಸ್ಥೆಯಿಂದ ಮಾಡಲಾಗುತ್ತಿದೆ. ಪಟ್ಟಣ ಪ್ರದೇಶದ ಯುವಕರಿಗೆ ಕೃಷಿಯ ಕುರಿತು ಆಸಕ್ತಿ ಕಡಿಮೆಯಾಗುತ್ತಿದ್ದು, ಅವರನ್ನು ಕೃಷಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಸಹ ಕೆಸರುಗದ್ದೆ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.
ಗ್ರಾಮೀಣ ಪ್ರತಿಭೆ ಗುರುತಿಸಿ: ಜೇಸಿ ನಿಕಟಪೂರ್ವ ವಲಯಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಜೇಸಿ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದ್ದು, ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆ ಹೊರಹೊಮ್ಮಿ ಅವರಲ್ಲಿನ ಚೈತನ್ಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಜಿ.ಪಂ. ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ಕಾಫಿ ಬೆಳೆಗಾರ ಜಿ. ಶಬ್ಬೀರ್ ಅಹ್ಮದ್, ಜೇಸಿ ನಿಕಟಪೂರ್ವ ಅಧ್ಯಕ್ಷ ಸುಧಾಕರ್, ಕಾರ್ಯದರ್ಶಿ ಎಂ.ಡಿ. ಪ್ರಕಾಶ್, ಕಾರ್ಯಕ್ರಮ ನಿರ್ದೇಶಕ ಜಗದೀಶ್, ನಿತ್ಯಾನಂದ, ವಿ.ಜಿ. ನಾರಾಯಣ್ ಉಪಸ್ಥಿತರಿದ್ದರು.
ವಿಜೇತರು:  ಪುರುಷರ ವಿಭಾಗ- ಹಗ್ಗಜಗ್ಗಾಟ- ಎಂಟಿಆರ್- ಎ, ಮಂಗಳೂರು (ಪ್ರ), ಜೈ ಭಾರತ್ ತಂಡ (ದ್ವಿ). ವಾಲಿಬಾಲ್- ಮಾಗುಂಡಿ ತಂಡ (ಪ್ರ), ಸೀಕೆ ಮ್ಯ್ಸ್ಯ್ಸ್ಟ್‌ರ್ಸ್ (ದ್ವಿ). ಕೆಸರುಗದ್ದೆ ಓಟ- ಪ್ರವೀಣ್ ಮಾಗಲು (ಪ್ರ), ಜಂಶೀದ್ ಮಾಗುಂಡಿ (ದ್ವಿ), ಸಂಪತ್ ಮಾಗಲು (ತೃ).
ಮಹಿಳೆಯರ ವಿಭಾಗ: ಕೆಸರುಗದ್ದೆ ಓಟ- ಎಚ್.ಎಸ್. ಅಶ್ವಿನಿ (ಪ್ರ), ಕೆ.ಎಚ್. ಪ್ರಗತಿ (ದ್ವಿ), ಕೆ.ಆರ್. ಆಶಾ (ತೃ). ಬಾಲ್ ಟು ಬಕೆಟ್- ಕೆ.ಆರ್. ಆಶಾ (ಪ್ರ),  ಅಶ್ವಿನಿ (ದ್ವಿ), ಕೆ.ಎಚ್. ಪ್ರಗತಿ (ತೃ) ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement