ಹುಲಿ ರಕ್ಷಿತ ಪ್ರದೇಶಕ್ಕೆ ಅಕ್ರಮ ಪ್ರವೇಶ: ಜೈಲು
ಚಿಕ್ಕಮಗಳೂರು: ಭದ್ರಾ ಹುಲಿ ರಕ್ಷಿತ ಅರಣ್ಯ ಪ್ರದೇಶವನ್ನು ಪ್ರವೇಶ ಮಾಡಿದ ವ್ಯಕ್ತಿಗೆ ಜೆ.ಎಂ.ಎಫ್.ಸಿ ನ್ಯಾಯಾಲಯವು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
2012ರ ಡಿಸೆಂಬರ್ 12 ರಂದು ಸನ್ನಿಬಾಬು ಎಂಬುವವರು ಭದ್ರಾ ಹುಲಿ ಮೀಸಲು ನಿರ್ಬಂಧಿತ ಪ್ರದೇಶವಾದ ಕೆಸವೆಯಿಂದ ಹಿಪ್ಲಾ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು. ಮುತ್ತೋಡಿ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾ. ದಯಾನಂದ ವಿ. ಹಿರೇಮಠ ಅವರು, ಆರೋಪಿ ಸನ್ನಿಬಾಬುವಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
--