ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Mainashree
Updated On : 18 Aug 2013, 11:49 am

ಸ್ವಾತಂತ್ರೋತ್ಸವ
ಬೀರೂರು: 67 ನೇ ಸ್ವಾತಂತ್ರ್ಯದಿನಾಚರಣೆಯ ಪ್ರಧಾನ ಸಮಾರಂಭ ಪಟ್ಟಣದ ಸರ್ಕಾರಿ ಕೆಎಲ್‌ಕೆ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಜರುಗಿತು.
 ಧ್ವಜಾರೋಹಣ ನೆರವೇರಿಸಿ ಮತ್ತು ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಆರ್. ಕೃಷ್ಣಮೂರ್ತಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮರು ತೆತ್ತಿರುವ ತ್ಯಾಗದ ಬೆಲೆ ಕಟ್ಟಲಾಗದು. ಮಹಾತ್ಮರ ಆದರ್ಶಗಳನ್ನು ರೂಢಿಸಿಕೊಳ್ಳುವಲ್ಲಿ ನಾವು ಎಡುವುತ್ತಿದ್ದೇವೆ ಎಂಬ ಭಾವನೆ ಕಾಡುತ್ತಿದೆ. ಗಾಂಧೀಜಿಯವರ ರಾಮರಾಜ್ಯದ ಕನಸು ಕನಸಾಗಿಯೇ ಉಳಿದಿದೆ ಎಂದರು.  ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಹಾದಿ ಕಠಿಣವಾಗಿದ್ದು ಮಹಾತ್ಮರ ತ್ಯಾಗ ಬಲಿದಾನ ಹೋರಾಟದ ಮಾರ್ಗ ಹಾಗೂ ಅವರ ಸಂಕಲ್ಪ ಪೂರ್ಣವಾಗಬೇಕಾದರೆ ಪ್ರಾಮಾಣಿಕತೆಗೆ ಬೆಲೆ ನೀಡಬೇಕು ಎಂದರು. ಶಿಕ್ಷಣಾಧಿಕಾರಿ ಮೋಹನಕುಮಾರ್ ಮಾತನಾಡಿದರು. ಸ್ಪರ್ಧೆಗಳನ್ನು ಮತ್ತು ಸ್ಥಬ್ದ ಚಿತ್ರಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕೊಳೆತ ಶವ ಪತ್ತೆ
ನರಸಿಂಹರಾಜಪುರ: ಸಮೀಪದ ಮೆಣಸೂರಿನ ಹೊಸ ಸೇತುವೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ಕೊಳೆತ ಶವವೊಂದು  ಶನಿವಾರ ಸಂಜೆ ಪತ್ತೆಯಾಗಿದೆ.
ಮೃಚನನ್ನು ಪಟ್ಟಣದ ಅಗ್ರಹಾರದ ಡಿಪೋ ರಸ್ತೆಯ ಅಮಿತ್ (21) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ  ಮೆಣಸೂರಿನ ಹೊಸ ಸೇತುವೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ಶವವೊಂದು ತೇಲುತ್ತಿರುವುದು ಸಮೀಪದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಾಣಿಸಿದೆ.
ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ನೀರಿನಿಂದ ಮೇಲಕ್ಕೆ  ತಂದಿದ್ದಾರೆ. ಶವವನ್ನು ಪತ್ತೆ ಹಚ್ಚಿದ ಪೊಲೀಸರು ಡಿಪೋ ರಸ್ತೆಯ ನಿವಾಸಿ  ಅಮಿತ್ ಎಂದು ಗುರುತಿಸಿದ್ದಾರೆ. ಅಮಿತ್ ಕಳೆದ ಒಂದು ವಾರದಿಂದ ಮನೆ ಬಿಟ್ಟಿದ್ದನು ಎಂದು ತಿಳಿದು ಬಂದಿದೆ. ಎನ್.ಆರ್. ಪುರ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement