ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗಮಕ ಕಲೆ ಉಳಿವಿಗೆ ಆದ್ಯತೆ ಇರಲಿ: ಸೂರಿ

Rashmi Kasaragodu
Updated On : 19 Aug 2013, 11:28 am

ಕ.ಪ್ರ.ವಾರ್ತೆ ಟಿ ಕಡೂರು ಟಿ  ಆ.18
ಗ್ರಾಮೀಣ ಕಲೆಯನ್ನು ಜೀವಂತವಾಗಿಡಲು ಸಾಧ್ಯವಾಗಿದ್ದರೆ ಅದು ಗಮಕ ಕಲೆಯಿಂದ ಮಾತ್ರ ಸಾದ್ಯ ಎಂದು  ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕಡೂರು ತಾಲೂಕಿನ ಸಖರಾಯಪಟ್ಟಣದ ಭಾರತಿ ಚಂದ್ರಶೇಖರ ಸಭಾಂಗಣದ ಕು.ವೆಂ.ಚಂದ್ರಮೌಳಿ ಮನೆ ಅಂಗಳದಲ್ಲಿ ಆಯೋಜಿಸಲಾಗಿದ್ದ 'ಮನೆಯಂಗಳದಿ ಶ್ರಾವಣ ಸಂಜೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಮಕ ವಾಚನ ಮತ್ತು ವ್ಯಾಖ್ಯಾನಗಳು ಪ್ರತಿ ಹಳ್ಳಿಗಳಲ್ಲಿ ಮತ್ತೆ ಪ್ರಾರಂಭಗೊಳ್ಳಬೇಕಾಗಿದೆ ಎಂದು ಹೇಳಿದರು.  
ಕೃಪಾ ಗಮಕ ವಾಚನ ಮಾಡಿದರು. ವಿಶ್ವನಾಥ್ ವ್ಯಾಖ್ಯಾನ ಮಾಡಿದರು. ಸಖರಾಯಪಟ್ಟಣ ಹೋಬಳಿ ಕಸಾಪ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಖರಾಯಪಟ್ಟಣ ಹೋಬಳಿ ಕಸಾಪ ಕಾರ್ಯದರ್ಶಿ ಎಸ್.ಮಲ್ಲೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡೂರು ತಾಲೂಕು ಕಸಾಪ ಘಟಕದ ಗೌರವಾಧ್ಯಕ್ಷ ಹೆಚ್.ಇ. ಪರಮೇಶ್ವರಪ್ಪ, ಪಿಳ್ಳೇನಹಳ್ಳಿ ಮಲ್ಲೇಶಪ್ಪ, ಗ್ರಾಮಸ್ಥರಾದ ವೀರೇಗೌಡ, ಬೀರಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಮುರಳಪ್ಪ ಸ್ವಾಗತಿಸಿದರು. ಶೇಖರಪ್ಪ ವಂದಿಸಿದರು.ರುಕ್ಮಿಣಿ ಪ್ರಾರ್ಥಿಸಿದರು.ಎಸ್. ಶಿಕ್ಷಕ ಉಮಾಮಹೇಶ್ವರ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement