ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಳೆ ಗಮಕ ರೂಪಕ ಪ್ರದರ್ಶನ

Rashmi Kasaragodu
Updated On : 19 Aug 2013, 11:28 am

ಚಿಕ್ಕಮಗಳೂರು: ಕಲ್ಕಟ್ಟೆ ಪುಸ್ತಕದಮನೆ ನೇತೃತ್ವದಲ್ಲಿ ಆ.20ರಂದು ನಗರದಲ್ಲಿ ನೂತನ ಪರಿಕಲ್ಪನೆಯ ಗಮಕ ರೂಪಕ ಪ್ರದರ್ಶನಗೊಳ್ಳಲಿದೆ.  
ಕುಮಾರವ್ಯಾಸ ಭಾರತದ ಶ್ರೀ ಕೃಷ್ಣಸಂಧಾನ ಗಮಕ ವಾಚನ, ನೃತ್ಯ, ವ್ಯಾಖ್ಯಾನದ ವಿಶಿಷ್ಠ ಕಾರ್ಯಕ್ರಮ ಸಂಜೆ 6 ಗಂಟೆಗೆ ರತ್ನಗಿರಿ ರಸ್ತೆಯ ಭುವನೇಂದ್ರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಲಿದೆ. ವಿದ್ಯಾಸಂಸ್ಥೆ ರುವಾರಿ ಬಿ.ಎಚ್. ನರೇಂದ್ರ ಪೈ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶ್ರೀ ಕಂಠೇಶ್ವರ ಕಲಾಮಂದಿರದ ವಿದುಷಿ ಸುಮನಾ ರಾಮಚಂದ್ರ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಉಪನ್ಯಾಸಕ ಕಲ್ಕಟ್ಟೆ ಪುಸ್ತಕದಮನೆಯ ಎಚ್.ಎಂ. ನಾಗರಾಜರಾವ್ ಗಮಕ ವಾಚಿಸಲಿದ್ದು, ಸಾಹಿತಿ ಬೆಳವಾಡಿ ಮಂಜುನಾಥ ವ್ಯಾಖ್ಯಾನಿಸುವರು. ರಶ್ಮಿತಾ ರಮೇಶ್, ಐಶ್ವರ್ಯ, ತೇಜಸ್ವಿ ನಿಬಾಧ್ಯ ನೃತ್ಯಾಭಿನಯಿಸಲಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement