ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲಾರಿ- ಆಟೋ ನಾಲೆಗೆ: 8 ಮಂದಿ ಗಾಯ

Rashmi Kasaragodu
Updated On : 19 Aug 2013, 11:29 am

ಕ.ಪ್ರ.ವಾರ್ತೆ ಟಿ ತರೀಕೆರೆ ಟಿ  ಆ.18
ಇಲ್ಲಿಗೆ ಸಮೀಪದ ಕಟ್ಟೆಹೊಳೆ ಸೇತುವೆ ಬಳಿ ಲಾರಿ-ಅಟೋ ಅಪಘಾತ ಸಂಭವಿಸಿ  ಎರಡೂ ವಾಹನಗಳು ಸೇತುವೆಯಿಂದ 30 ಅಡಿ ನಾಲೆಯೊಳಕ್ಕೆ ತಲೆ ಕೆಳೆಗಾಗಿ ಬಿದ್ದ ಪರಿಣಾಮ, ಲಾರಿಯೊಳಗಿದ್ದ ಐವರು ಮತ್ತು ಆಟೋದಲ್ಲಿದ್ದ ಮೂವರಿಗೆ ಗಾಯಗಳಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಜಲ್ಲಿ ತುಂಬಿದ ಲಾರಿ ತರೀಕೆರೆ ಕಡೆಗೆ ಬರುತ್ತಿದ್ದು, ಸೇತುವ ಬಳಿ ಎದುರಿಗೆ ಬಂದ ಆಟೋ ನಡುವೆ ಈ ಅಪಘಾತ ಸಂಭವಿಸಿದ್ದು, ಸೇತುವೆಯ ಎರಡೂ ಪಕ್ಕಕ್ಕೆ ಸುಮಾರು 30 ಅಡಿ ಆಳದಲ್ಲಿ ನೀರು ತುಂಬಿ ಹರಿಯುತ್ತಿದ್ದ ನಾಲೆಗೆ ಲಾರಿ ತಲೆಕೆಳೆಗಾಗಿ ಬಿದ್ದಿದೆ. ಗಾಯಾಳುಗಳನ್ನು ತರೀಕೆರೆ ಹಾಗೂ ಶಿವಮೊಗ್ಗ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಅಪಾಯದ ಸೇತುವೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟ್ಟೆಹೊಳೆ ಬಳಿ ಇರುವ ಈ ಸೇತುವೆ ಹೆಚ್ಚು  ಅಪಾಯದ ತಿರುವಿನಲ್ಲಿದ್ದು, ಸೇತುವೆ ತಡೆಗೋಡೆಗಳು ತುಂಬಾ ಕಿರಿದಾಗಿದ್ದು, ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು ದೂರದಿಂದ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಈ ನಿಟ್ಟಿನಲ್ಲಿ ಈ ಸೇತುವೆ ಬಳಿ ಒಂದಲ್ಲಾ ಒಂದು ಅಫಘಾತ ಸಂಭವಿಸುತ್ತಿರುತ್ತದೆ.
ಹೆದ್ದಾರಿ ಇಲಾಖೆ ಎಚ್ಚರಿಕೆ ವಹಿಸಿಲ್ಲ: ಸೇತುವೆ ತಡೆಗೋಡೆಗಳನ್ನು ತುಸು ಎತ್ತರವಾಗಿ ಮತ್ತು ಗಟ್ಟಿಮುಟ್ಟಾಗಿ ನಿರ್ಮಿಸುವಂತೆ ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಕ್ತ ಎಚ್ಚರಿಕೆ ವಹಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈಗಲಾದರೂ ಇಲಾಖೆ ಎಚ್ಚೆತ್ತು ದೊಡ್ಡ ಸೇತುವೆಯ ಎರಡೂ ಬದಿಯ ತಡೆಗೋಡೆಗಳನ್ನು ತುಸು ಎತ್ತರವಾಗಿ ಮತ್ತು ಗಟ್ಟಿಮುಟ್ಟಾಗಿ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement