ಇಂದು, ನಾಳೆ ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ಆಲ್ದೂರು ಮತ್ತು ಬಾಳೆಹೊನ್ನೂರು ವಿ.ವಿ. ಕೇಂದ್ರದ ಮಾರ್ಗದಲ್ಲಿ ಜಂಗಲ್ ಕಟ್ಟಿಂಗ್ ಹಾಗೂ ತುರ್ತು ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆ.20 ಹಾಗೂ 21ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಾಳೆಹೊನ್ನೂರು ವಿ.ವಿ. ಕೇಂದ್ರ ಹಾಗೂ ಕೊಪ್ಪ, ಶೃಂಗೇರಿ, ಕ್ವಾರ್ಡ್ಹಿತ್ಲು, ಕಳಸ, ಜಯಪುರ, ಎನ್.ಆರ್. ಪುರ ವಿ.ವಿ. ಕೇಂದ್ರಗಳ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಚಿಕ್ಕಮಗಳೂರು ವಿವಿ ಕೇಂದ್ರದ ಮಾರ್ಗದಲ್ಲಿ ವಾಹಕ ಬದಲಾವಣೆ ಕಾರ್ಯವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆ.20 ಹಾಗೂ 21ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಚಿಕ್ಕಮಗಳೂರು ವಿ.ವಿ. ಕೇಂದ್ರದಿಂದ ಹೊರಹೊಮ್ಮುವ ಮಲ್ಲಂದೂರು ಫೀಡರ್ನ ಜೋಳದಾಳು, ಗಾಳಿಪೇಟೆ, ಇಂದಾವರ, ಹುಕ್ಕುಂದ, ಶಿರವಾಸೆ, ಮಲ್ಲಂದೂರು, ಆವುತಿ ಮತ್ತು ವಸ್ತಾರೆ ಫೀಡರ್ನ ಮೂಗ್ತಿಹಳ್ಳಿ, ಕೂದುವಳ್ಳಿ, ಹಲಸುಮನೆ, ಕೂದುವಳ್ಳಿ ಹಾಗೂ ನಗರದ ವಿಜಯಪುರ ಮತ್ತು ಗೌರಿಕಾಲುವೆ ವಿ.ವಿ. ಕೇಂದ್ರಗಳ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಯುವಜನ ಸೇವಾ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಅಭಯಚಂದ್ರ ಜೈನ್ ಅವರು ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 11ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 98ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 12.30ಕ್ಕೆ ನಗರದ ವೈಶ್ಯ ಹಾಸ್ಟೆಲ್ನಲ್ಲಿ ದಿ.ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 5 ಗಂಟೆಗೆ ಮೂಡಬಿದರೆಗೆ ಪ್ರಯಾಣ ಬೆಳೆಸಲಿದ್ದಾರೆ.