ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮನಸೆಳೆದ ಮೇಘ ಮಯೂರಿ ಯಕ್ಷಗಾನ

Rashmi Kasaragodu
Updated On : 20 Aug 2013, 11:16 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಆ.19
ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಕುಂದಾಪುರದ ಶ್ರೀ ಮಹಾಗಣಪತಿ ಯಕ್ಷಗಾನ ಪ್ರವಾಸಿ ಕಲಾತಂಡದಿಂದ ಭಾನುವಾರ ಸಂಜೆ ನಡೆದ ಮೇಘ ಮಯೂರಿ ಕಾಲಮಿತಿ ಯಕ್ಷಗಾನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಾಲಾಡಿಯ ಜಿ. ರಾಘವೇಂದ್ರ ಮಯ್ಯ ಅವರ ಕಂಚಿನ ಕಂಠದ ಗಾಯನ ತೆಗ್ಗರ್ಸೆ ಯೋಗೇಂದ್ರ ಆಚಾರ್ಯ ಮತ್ತು ಬೆಳ್ವೆಯ ಗಣೇಶ್ ಶೆಟ್ಟಿ ಅವರ ಸಂಗೀತ, ವೇಷಧಾರಿಗಳ ಅದ್ಬುತ ಅಭಿನಯ ನೋಡುಗರನ್ನು ಮೋಡಿ ಮಾಡಿ ಅವರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟಿತು.
ಸ್ತ್ರೀ ವೇಷದಾರಿಗಳಾದ ಹೆನ್ನಾಬೈಲು ಸಂಜೀವಶೆಟ್ಟಿ ಮತ್ತು ಕೃಷ್ಣ ಗಾಣಿಕ ಅವರ ಸಹಜಾಭಿನಯ ನೋಡುಗರನ್ನು ಮಂತ್ರಮುಗ್ಧಗೊಳಿಸಿದರೆ ಕಡಬ ಪೂವಪ್ಪ ಮತ್ತು ಉಳ್ಳೂರು ಶಂಕರನಾಯ್ಕ ಅವರ ಹಾಸ್ಯಾಭಿನಯ, ಚುರುಕು ಸಂಭಾಷಣೆ ಕಲಾಮಂದಿರದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸಿತು.
ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ಇದೇ ವೇಳೆ ಸಿಪಿಐ ಮುಖಂಡ ಎಚ್.ಎಸ್. ರೇಣುಕಾರಾಧ್ಯ, ಜನಾಂಗದ ಮುಖಂಡ ಬಿ. ನಾರಾಯಣ್ ಮತ್ತು ಯಕ್ಷಗಾನ ತಂಡದ ಕೋಡಿ ವಿಶ್ವನಾಥ ಗಾಣಿಗ ಅವರುಗಳನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಲ್. ಶಂಕರ್ನಾಥ್ ಕಲಾವಿದರನ್ನು ಸಭೆಗೆ ಪರಿಚಯಿಸಿದರು. ಅಧ್ಯಕ್ಷ ಕೆ. ರಾಮಣ್ಣ ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ನಂದೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement