ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸೆ.1 ರಂದು ಸಹಕಾರ ಸಂಘಕ್ಕೆ ಚುನಾವಣೆ

Rashmi Kasaragodu
Updated On : 20 Aug 2013, 11:28 am

ಮೂಡಿಗೆರೆ: ತಾಲೂಕಿನ 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಸೆ.1 ರಂದು ನಡೆಯಲಿರುವ ಚುನಾವಣೆಗೆ ಉಮೇದಾರರು ನಿಗದಿತ ನಮೂನೆಯಲ್ಲಿ ನಾಮ ಪತ್ರ ಸಲ್ಲಿಸಲು 24 ಕೊನೆ ದಿನ ಎಂದು ಸಹಕಾರ ಸಂಘ ತಿಳಿಸಿದೆ.
ರಿಟರ್ನಿಂಗ್ ಆಫೀಸರ್ಗಳಾಗಿ ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಂ.ಎಸ್. ಗೋಪಾಲಗೌಡ , ನಿಡುವಾಳೆ ಗುರುಮೂರ್ತಿ, ಬಿ. ಹೊಸಳ್ಳಿಗೆ ಟಿ.ಎಸ್. ವೆಂಕಟೇಶ್, ದಾರದಹಳ್ಳಿಗೆ ಸಿ.ಸಿ. ರುದ್ರೇಗೌಡ, ಗೌಡಹಳ್ಳಿಗೆ ಶಶಿಕಾಂತ್ ಕಾರ್ಯ ನಿರ್ವಹಿಸಲಿದ್ದಾರೆ. ಮಾಹಿತಿಗೆ ಸಿಇಒ ಮಹಮ್ಮದ್ ಇಲಿಯಾಜ್, ಜಗನ್ನಾಥ್, ವೇಣುಗೋಪಾಲ್, ಎಚ್.ಸಿ. ಸುಮಿತ್ರ, ರವೀಂದ್ರ ಕುಮಾರ್ ಸಂಪರ್ಕಿಸಿ.


ಸ್ಟ್ರೋಕ್ ತಡೆಗಟ್ಟುವಿಕೆ ಶಿಬಿರ
 


ಶಿವಮೊಗ್ಗ: ನಗರದ ಹರಕೆರೆಯಲ್ಲಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ಟೋಕ್ ತಡೆಗಟ್ಟುವಿಕೆ ಕುರಿತಾಗಿ ಉಚಿತ ಶಿಬಿರ ಹಮ್ಮಿಕೊಳ್ಳಳಾಗಿದೆ.
ಈ ಶಿಬಿರ ಆಗಸ್ಟ್ 31ರ ವರೆಗೆ ನಡೆಯಲಿದ್ದು, ಎಫ್ಬಿಎಸ್, ಪಿಪಿಬಿಎಸ್ ಮತ್ತು ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಜೊತೆಗೆ ತಜ್ಞ ವೈದ್ಯರೊಂದಿಗೆ ಉಚಿತ ಸಂದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸ್ಟ್ರೋಕ್ನಿಂದ ಬಳಲುತ್ತಿದ್ದು, ಆಗಾಗ ತಲೆ ಸುತ್ತು ಬರುವುದು, ಕಣ್ಣುಗಳಲ್ಲಿ ಮಂಜು ಬರುವುದು, ಕಣ್ಣಿನ ಮುಂದೆ ಪರದೆ ಬಂದ ಹಾಗೆ ಆಗುವುದು, ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಶಿಬಿರದ ಸದುಪಯೋಗಪಡೆದುಕೊಳ್ಳಬಹುದು ಎಂದು ಆಸ್ಪತ್ರೆ ಉಪನಿರ್ದೇಶಕ ಡಾ.ಶ್ರೀನಿವಾಸ ಎಂ. ಹೇಳಿದರು.
ಶಿಬಿರ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವವರು ಖಾಲಿ ಹೊಟ್ಟೆಯಲ್ಲಿ ಬರಬೇಕಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಮತ್ತು ಯಶಸ್ವಿನಿ ಫಲಾನುಭವಿಗಳಿಗೆ ಶಿಬಿರದಲ್ಲಿ ನ್ಯೂನತೆ ಕಂಡಲ್ಲಿ ಉಚಿತಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ. 08182 221588.
 


ಪ್ರತಿಭಾ ಪುರಸ್ಕಾರ
ಶೃಂಗೇರಿ: ತಾಲೂಕಿನ ಹೊಳೆಕೊಪ್ಪ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 67 ನೇ ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಳಕ ಲಕ್ಷ್ಮಿನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement