ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹಿಟ್ಟಿನ ಶುಲ್ಕ ಪರಿಷ್ಕರಣೆ: ಗಿರಣಿ ಸಂಘ

Rashmi Kasaragodu
Updated On : 20 Aug 2013, 11:27 am

ಶಿವಮೊಗ್ಗ: ಹಿಟ್ಟಿನ ಗಿರಣಿಗಳು, ಧಾನ್ಯ ಹಿಟ್ಟು ಮಾಡುವ ಶುಲ್ಕ ಪರಿಷ್ಕರಣೆ ಮಾಡಿರುವುದಾಗಿ ತಾಲೂಕು ಹಿಟ್ಟಿನ ಗಿರಣಿ ಸಂಘ ತಿಳಿಸಿದೆ. ಇತ್ತೀಚೆಗೆ ವಿದ್ಯುತ್ ಹಾಗೂ ಇತರೆ ಯಾಂತ್ರಿಕ ಬಿಡಿ ಭಾಗಗಳ ಬೆಲೆ ಏರಿಕೆ, ನಗರಸಭೆಯ ಲೈಸೆನ್ಸ್ ದರಗಳ ಏರಿಕೆಯಿಂದ
ನಗರದ ಎಲ್ಲಾ ಹಿಟ್ಟಿನ ಗಿರಣಿಗಳ ಧಾನ್ಯಗಳನ್ನು ಹಿಟ್ಟು ಮಾಡುವ ದರವನ್ನು ಅನಿವಾರ್ಯವಾಗಿ ಹೆಚ್ಚಿಸಲಾಗಿದೆ ಎಂದು ಸಂಘ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಅಕ್ಕಿ, ಜೋಳ, ಗೋಧಿ, ನವಣೆ, ಬೇಳೆ ಕಾಳು ಇತ್ಯಾದಿಯನ್ನು ಒಂದು ಕೆಜಿ ಹಿಟ್ಟು ಮಾಡಿಕೊಡಲು ರು. 5 ನಿಗದಿ ಮಾಡಿದ್ದರೆ, ರವೆ, ರಾಗಿ ಇತ್ಯಾದಿಗೆ ರು. 4, ಮೆಣಸಿನ ಕಾಯಿ ಪುಡಿ, ಸಾಂಬಾರ ಪುಡಿ, ಧನಿಯಾ, ಅರಿಶಿಣಕ್ಕೆ ರು. 25, ರಾಗಿ ಕ್ಲೀನಿಂಗ್ಗೆ ರು. 4 ನಿಗದಿ ಮಾಡಿ ಶುಲ್ಕ ಪರಿಷ್ಕರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement