ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಳೆ ಬೆಳೆಯಿಂದ ರೈತರಿಗೆ ಉತ್ತಮ ಆದಾಯ

Rashmi Kasaragodu
Updated On : 21 Aug 2013, 11:55 am

ನರಸಿಂಹರಾಜಪುರ: ತಾಳೆ ಅಂತಾರಾಷ್ಟೀಯ ಬೆಳೆಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತಮ ಧಾರಣೆ ಬರಲಿದೆ ಎಂದು ಶಿವಮೊಗ್ಗ,ಚಿಕ್ಕಮಗಳೂರು ಜಿಲ್ಲೆಯ ತಾಳೆ ಬೆಳೆ ಯೋಜನೆಯ ನೋಡಲ್ ಅಧಿಕಾರಿ ಶಿವಾನಂದ್ ತಿಳಿಸಿದರು.
 ಮಂಗಳವಾರ ಅಗ್ರಹಾರದ ಸುಬ್ಬಣ್ಣ ನಾಡಿಗ್ ಅವರ ಮನೆಯ ಆವರಣದಲ್ಲಿ ತಾಲೂಕು ತಾಳೆ ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 1998 ರಲ್ಲಿ ರಾಜ್ಯದಲ್ಲಿ ತಾಳೆ ಬೆಳೆ ಪ್ರಾರಂಭವಾಗಿದ್ದು, ಸರ್ಕಾರ ಪ್ರೋತ್ಸಾಹ ನೀಡುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದಲೂ ಪ್ರೋತ್ಸಾಹ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ತಾಳೆ ಬೆಳೆ ಅನುಷ್ಠಾನಗೊಳಿಸಬೇಕಾಗಿದೆ ಎಂದರು.
1 ಟನ್ ತಾಳೆಗೆ 650 ರುಪಾಯಿ ನೀಡಲಾಗುವುದು. ಜೊತೆಗೆ ಕರ್ನಾಟಕ ಬೀಜ ಮಂಡಳಿಯಿಂದ 750 ರುಪಾಯಿ ನೀಡಲಾಗುತ್ತದೆ. ಎರಡೂ ಇಲಾಖೆಗಳ ಹಣ ಹೊಂದಿಸಿ ಕೊಡುವುದರಿಂದ ಹಣ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದರು. ಕೇಂದ್ರ ಸರ್ಕಾರದ ಬಜೆಟ್ನಲ್ಲಿ ತಾಳೆ ಬೆಳೆಗಾರರಿಗೆ ಭದ್ರತೆ ಮೂಡಿಸಲು ಕಾಯ್ದೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕಾಯ್ದೆ ಅನುಷ್ಠಾನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕನಿಷ್ಠ 10 ರುಪಾಯಿ ಕೊಡಿ: ಜಿಲ್ಲಾ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಕೆ. ಜಾನಕೀರಾಮ್ ಮಾತನಾಡಿ, ತಾಳೆಗೆ ಈಗ ಇರುವ 7 ರುಪಾಯಿ ಬೆಲೆ ಸಾಕಾಗುವುದಿಲ್ಲ. ಕನಿಷ್ಠ 1 ಕೆ.ಜಿ. ತಾಳೆಗೆ 10 ರುಪಾಯಿಯಾದರೂ ಕೊಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು. ಭಾರತ ದೇಶದಲ್ಲಿ ಪಾಮಾಯಿಲ್ ಕೊರತೆ ಇದ್ದು ವಿದೇಶದಿಂದ 40 ಲಕ್ಷ ಟನ್ ಪಾಮಾಯಿಲ್ ಆಮದು ಮಾಡಿಕೊಳ್ಳಲಾಗುತ್ತಿದೆ. ಅಡಕೆ ಹಳದಿ ಎಲೆ ರೋಗ ಇರುವುದರಿಂದ ಮಲೆನಾಡಿನ ರೈತರಿಗೆ ರಬ್ಬರ್ ಹಾಗೂ ಪಾಮಾಯಿಲ್ ಪರ್ಯಾಯ ಬೆಳೆಯಾಗಲಿದೆ. ರೈತರು ಹೆಚ್ಚು ತಾಳೆ ಬೆಳೆಯುವಂತೆ ಅವರು ಮನವಿ ಮಾಡಿದರು.
 ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎನ್. ರತ್ನಾಕರ್ ಮಾತನಾಡಿ, ಹವಾಮಾನ ವೈಪರೀತ್ಯದಿಂದ ತಾಳೆ ಬೆಳೆ ಶೇ.50 ರಷ್ಟು ಕುಸಿದಿದೆ. ಜೊತೆಗೆ ತಾಳೆ ಬೆಳೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.
 ವಾಸ್ತವವಾಗಿ ತಾಳೆ ಬೆಳೆ ಲಾಭದಾಯಿಕ ಬೆಳೆಯಾಗಿದ್ದು ವರ್ಷದ 12 ತಿಂಗಳೂ ಬೆಳೆ ಬರಲಿದೆ. ಸಮಸ್ಯೆ ಬಂದಾಗ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಫಲ ಸಿಗುತ್ತದೆ ಎಂದರು. ಸಭೆಯಲ್ಲಿ ಭದ್ರಾವತಿಯ ಬಾಲಾಜಿ ಆಯಿಲ್ ಪಾಮಾಯಿಲ್ವ್ಯವಸ್ಥಾಪಕ ಅನಂತಿ ಮುರಘವೇಲ್ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕಿನ ತಾಳೆ ಬೆಳೆಗಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement