ನಾಳೆಯಿಂದ ಗ್ರಾಮ ಸಭೆ
ಚಿಕ್ಕಮಗಳೂರು: ತಾಲೂಕಿನ ಆಣೂರು ಗ್ರಾಪಂ ವ್ಯಾಪ್ತಿಯ ವಾರ್ಡ್ ಹಾಗೂ ಗ್ರಾಮ ಸಭೆ ಆ. 22 ರಿಂದ 26 ರವರೆಗೆ ನಡೆಯಲಿದೆ. ಬಸಗೋಡು ವಾರ್ಡ್ ಸಭೆ ಆ. 22 ರಂದು ಬೆಳಗ್ಗೆ 10 ಗಂಟೆಗೆ ಬಸಗೋಡು ಸ.ಹಿ.ಪ್ರಾ. ಶಾಲೆಯಲ್ಲಿ ಹಾಗೂ ಮಧ್ಯಾಹ್ನ 1 ಕ್ಕೆ ಕಲ್ಲುಗುಡ್ಡೆಯ ಸ.ಹಿ.ಪ್ರಾ. ಶಾಲೆಯಲ್ಲಿ, ಕೆಸರಿಕೆಯ ವಾರ್ಡ್ ಸಭೆ 23 ರಂದು ಬೆಳಗ್ಗೆ 10 ಕ್ಕೆ ಕೆಸರಿಕೆಯ ಸ.ಹಿ.ಪ್ರಾ. ಶಾಲೆಯಲ್ಲಿ, ಕೋಡುವಳ್ಳಿ ವಾರ್ಡ್ ಸಭೆ 24 ರಂದು ಬೆಳಗ್ಗೆ 10ಕ್ಕೆ ಕೋಡುವಳ್ಳಿಯ ಸ.ಹಿ.ಪ್ರಾ. ಶಾಲೆಯಲ್ಲಿ ಹಾಗೂ ಮಾವಿನಗುಣಿ ವಾರ್ಡ್ ಸಭೆ ಮಧ್ಯಾಹ್ನ 1 ಕ್ಕೆ ಮಾವಿನಗುಣಿಯ ಸ.ಹಿ.ಪ್ರಾ. ಶಾಲೆಯಲ್ಲಿ ವಾರ್ಡ್ ಸಭೆ ನಡೆಯಲಿದೆ.
ಆ. 26ರ ಬೆಳಿಗ್ಗೆ 10ಕ್ಕೆ ಆಣೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮ ಸಭೆಯು ಆಣೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.
ಸುಗಮ ಸಂಗೀತ ಪರಿಷತ್ತಿಗೆ ಆಯ್ಕೆ
ಚಿಕ್ಕಮಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಗೆ ನಗರದ ಸುಗಮ ಸಂಗೀತ ಗಂಗಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಮತ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ವೈ.ಕೆ. ಮುದ್ದುಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.