ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಭೆ ಮುಂದೂಡಿಕೆ

Rashmi Kasaragodu
Updated On : 21 Aug 2013, 11:58 am

ನರಸಿಂಹರಾಜಪುರ: 21 ರಂದು ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಸದ್ಯದಲ್ಲೇ ನೇಕಾರರ ಒಕ್ಕೂಟ ಅಸ್ಥಿತ್ವಕ್ಕೆ: ನಾರಾಯಣ್
ಚಿಕ್ಕಮಗಳೂರು: ಹಿಂದುಳಿದಿರುವ ನೇಕಾರ ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮೇಲೆತ್ತುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನೇಕಾರರ ಒಕ್ಕೂಟವನ್ನು ಸದ್ಯದಲ್ಲೇ ಅಸ್ಥಿತ್ವಕ್ಕೆ ತರಲಾಗುವುದು ಎಂದು ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಎಚ್.ಎಂ. ನಾರಾಯಣ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಹರಿದು ಹಂಚಿಹೋಗಿರುವ ನೇಕಾರರ ಉಪ ಪಂಗಡಗಳಾದ ದೇವಾಂಗ, ಕುರುಹಿನಶೆಟ್ಟಿ, ಪದ್ಮಶಾಲಿ, ಪಟ್ಟಸಾಲೆ, ತೊಗಟವೀರ, ಜಾಡ, ಕೋಷ್ಠಿ, ಹಟಗಾರ ಪಂಗಡಗಳನ್ನು ಒಗ್ಗೂಡಿಸಿ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ ನೇಕಾರರ ಒಕ್ಕೂಟವನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ನೇಕಾರರ ಒಕ್ಕೂಟವನ್ನು ರಚಿಸುವ ನಿಟ್ಟಿನಲ್ಲಿ ಆ.27ರಂದು ನಗರದ ಲಯನ್ಸ್ ಸೇವಾ ಭವನದಲ್ಲಿ ಜನಾಂಗದ ಮುಖಂಡ ಅರೇಕಲ್ಲು ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆಗಾಗಿ ಸಮುದಾಯದ ಸಭೆ ಕರೆಯಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ನರಸಿಂಹರಾಜಪುರ: ಮೆಣಸೂರಿನ ಆದರ್ಶ ಯುವಕ ಸಂಘದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಸಂಘದ ಕಚೇರಿಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
 ಸಂಘದ ನೂತನ ಅಧ್ಯಕ್ಷರಾಗಿ ಅನಿಲ್, ಕಾಯದರ್ಶಿಯಾಗಿ ಎಲ್ದೋ, ಉಪಾಧ್ಯಕ್ಷರಾಗಿ ರಂಜನ್, ಉಪ ಕಾರ್ಯದರ್ಶಿಯಾಗಿ ಸಂದೇಶ್, ಖಜಾಂಚಿಯಾಗಿ ಬಿನು ಅಧಿಕಾರ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಜೋಸ್ ಇದ್ದರು. ಈ ಸಂದರ್ಭದಲ್ಲಿ ನೂತನ ಅದ್ಯಕ್ಷ ಅನಿಲ್ ಮಾತನಾಡಿ, ಆದರ್ಶ ಯುವಕ ಸಂವಘ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಗ್ರಾಮಸ್ಥರು ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಸಂಘ ಇನ್ನಷ್ಟು ಚಟವಟಿಗಳನ್ನು ನಡೆಸುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement