ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತಿವೃಷ್ಟಿ; ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚನೆ

Rashmi Kasaragodu
Updated On : 22 Aug 2013, 10:57 am

ನರಸಿಂಹರಾಜಪುರ: ಅತಿವೃಷ್ಟಿಯಿಂದ ಹಾನಿಗೊಳಗಾದ ಜಮೀನಿನ ರೈತರು ತಕ್ಷಣ ಆಯಾ ಗ್ರಾಪಂ ಅಥವಾ ಗ್ರಾಮ ಲೆಕ್ಕಿಕರಿಗೆ ಅರ್ಜಿ ಸಲ್ಲಿಸಬೇಕು ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಅನುರಾಧಾಸೂಚಿಸಿದ್ದಾರೆ.
 ತಾಲೂಕು ಕಚೇರಿಯಲ್ಲಿ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಹಾನಿಗೊಳಗಾದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರೈತರು ಅರ್ಜಿಯ ಜೊತೆಗೆ ಪಹಣಿ, ಹಾನಿಗೊಳಗಾದ ಪ್ರದೇಶದ ಪೋಟೊ ಸಲ್ಲಿಸಬೇಕು. ಅಡಕೆ, ಬಾಳೆಶುಂಠಿ, ರಬ್ಬರ್, ಕಾಫಿ, ಬತ್ತ ಬೆಳೆದ ರೈತರು ಮಳೆಯಿಂದ ಹಾನಿಗೊಳಗಾಗಿದ್ದರೆ ಅರ್ಜಿ ಸಲ್ಲಿಸಬಹುದು.
  ಅಡಕೆ ಕೊಳೆಯಿಂದ ಶೇ.50 ರಷ್ಟು ಹಾನಿಗೊಳಗಾಗಿದ್ದರೆ 1 ಹೆಕ್ಚೇರ್ ಪ್ರದೇಶಕ್ಕೆ 12 ಸಾವಿರ ರುಪಾಯಿ, ಬತ್ತ 1 ಹೆಕ್ಚೇರ್ ಪ್ರದೇಶಕ್ಕೆ 4.50 ಸಾವಿರ ರುಪಾಯಿ, ಬಾಳೆ 1 ಹೆಕ್ಚೇರ್ ಪ್ರದೇಶಕ್ಕೆ 4.50 ಸಾವಿರ ರುಪಾಯಿ ಪರಿಹಾರ ನೀಡಲಾಗುತ್ತದೆ. ರಬ್ಬರ್ ಹಾಗೂ ಕಾಫಿ ಬೆಳೆ ಹಾನಿಯಾಗಿದ್ದರೆ ಈ ಬಗ್ಗೆ ಆಯಾ ಮಂಡಳಿಗಳಿಗೆ ವರದಿ ಕಳಿಸಲಾಗುತ್ತದೆ. ಪರಿಹಾರವನ್ನು ನೀಡುವ ಬಗ್ಗೆ ಆಯಾ ಮಂಡಳಿಗಳೇ ನಿರ್ಧರಿಸಬೇಕು ಎಂದು ಅವರು ವಿವರಿಸಿದರು.
 ಸಭೆಯಲ್ಲಿ ಸಹಾಯಕ ತೋಟಗಾರಿಕ ನಿರ್ದೇಶಕಿ ಸೀಮಾ, ಕೃಷಿ ಇಲಾಖೆ ಅಧಿಕಾರಿಗಳು, ಜಿಪಂ, ಕಂದಾಯ ಇಲಾಖೆ, ಗ್ರಾಪಂ ಪಿಡಿಒ ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅತಿ ವೃಷ್ಟಿಯಿಂದ ಹಾನಿಗೆ ಒಳಗಾದ ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement