ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಲಬೆರಕೆ ರಸ ಗೊಬ್ಬರ ಮಾರಾಟ

Rashmi Kasaragodu
Updated On : 22 Aug 2013, 10:58 am

ಮೂಡಿಗೆರೆ: ಪಟ್ಟಣ ಸಹಕಾರಿ ಸಂಘ ಒಂದರಲ್ಲಿ ಕಲಬೆರಕೆ ರಸ ಗೊಬ್ಬರ ಮಾರಾಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.  ಕಾಮದೇನು ಹೆಸರಿನ17-17 ಎಫ್ಎಫ್ಸಿ ಗೊಬ್ಬರದ ಚೀಲಗಳು ಸಹಕಾರಿ ಸಂಘದಲ್ಲಿ ಮಾರಾಟವಾಗುತ್ತಿದ್ದು, ತಾಲೂಕಿನ ಗಬ್ಬಳ್ಳಿಪುರದ ಮಹೇಶ್ ಎಂಬ ರೈತ ಗೊಬ್ಬರ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಸಿಂಪಡಿಸಲು ಬಿಚ್ಚಿದಾಗ ಕಲ್ಲು, ಮರಳು ಮಿಶ್ರಿತ ಅಧಿಕವಾಗಿ ಕಂಡು ಬಂದಿದೆ. ತಕ್ಷಣವೇ ಗೊಬ್ಬರ ವ್ಯಾಪಾರಿ ಎಂ.ಎನ್. ಅಶ್ವಥ್ ಗಮನಕ್ಕೆ ತಂದ ಹಿನ್ನಲೆಯಲ್ಲಿ ಕಾರ್ಯ ಪ್ರವೃತ್ತರಾದ ಅಶ್ವಥ್ ಗೊಬ್ಬರದ ಮೂಟೆಗಳನ್ನು ವಾಹನಕ್ಕೆ ತುಂಬಿ ಪರೀಕ್ಷಾ ಕೇಂದ್ರಕ್ಕೆ ನೀಡಿದ್ದು, ಕಲ್ಲು ಮಿಶ್ರಿತ ಕಲಬೆರಕೆ ಎಂದು ದೃಢಪಡಿಸಿದ್ದು ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರು ಮತ್ತು ಸಂಘದ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದರ ಹಿನ್ನಲೆಯಲ್ಲಿ ಕಾಮದೇನು ಗೊಬ್ಬರದ ಸ್ಯಾಂಪಲ್ ಅನ್ನು ಸರ್ಕಾರಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು.
 ವಿಷಯ ತಿಳಿದ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರೀಕ್ಷೆ ನಂತರ ದೃಢ ವಾಗುವವರೆಗೂ ಕಾಮದೇನು ಬ್ರಾಂಡ್ ರಸಗೊಬ್ಬರವನ್ನು ಮಾರಾಟ ಮಾಡದಂತೆ ಸೂಚನೆ ನೀಡಿದರು. ಜಿಪಂ ಸದಸ್ಯ ಎಂ.ಎಸ್. ಅನಂತ್, ಹೇಮಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement