ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೂಡಿಗೆರೆ ತಾ, ಮಟ್ಟದ ವಿಶ್ವಕರ್ಮ ಸಮಾವೇಶ

Rashmi Kasaragodu
Updated On : 22 Aug 2013, 10:58 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಆ.21 ಮಾನವರೆಲ್ಲಾ ಒಂದೇ ಜಾತಿ ಒಂದೇ ಕುಲ ಎಂಬ ಬಸವಣ್ಣನವರ ತತ್ವದಂತೆ ನಾವು ಮನುಷ್ಯ ಜಾತಿ ಎಂಬುದನ್ನು ಅರಿಯ ಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದರು.
ಪಟ್ಟಣದ ಚರ್ಚ್ಹಾಲ್ನಲ್ಲಿ ಮೂಡಿಗೆರೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಶ್ವಕರ್ಮ ಸಮಾವೇಶ- 2013 ರರಲ್ಲಿ ಮಾತನಾಡಿ, ಬೇಲೂರು ವಿಶ್ವ ವಿಖ್ಯಾತವಾಗಲು ಅಂದಿನ ಕಾಲದ ಕಲ್ಲಿನ ಕೆತ್ತನೆ ಜೀವಂತ ಸಾಕ್ಷಿಯಾಗಿದೆ. ಈ ಕಲೆಯನ್ನು ಜೀವಂತವಾಗಿರುವಂತೆ ಸೃಷ್ಟಿ ಮಾಡಿದ ಸೃಷ್ಟಿಕರ್ತರೆ ವಿಶ್ವ ಕರ್ಮರು, ದೇಶಕ್ಕೆ ವಿಶ್ವ ಕರ್ಮ ಸಮುದಾಯದ ಕೊಡುಗೆ ಅಮೂಲ್ಯವಾದುದು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರನ್ನು ತಾಲೂಕು ವಿಶ್ವಕರ್ಮ ಸಮಾಜದಿಂದ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಪಿ. ನಂಜುಂಡಿ ನೆರವೇರಿಸಿದರು.  
ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾ ಅಧ್ಯಕ್ಷ ಜಿ.ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಎ.ವಿ. ರುದ್ರಪ್ಪಾಜೀರಾವ್, ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ಡಿ.ಎಸ್. ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಡಿ.ಆರ್. ಉಮಾಪತಿ, ಜಿ.ಟಿ. ರತ್ನಾಕರ್, ಜೆ.ಆರ್. ಗಣಪತಿ ಆಚಾರ್, ಸೀತಮ್ಮ, ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement