ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಹಾರ ಧನ ಪರಿಷ್ಕರಣೆಗೆ ಆಗ್ರಹ

Lingaraj Badiger
Updated On : 23 Aug 2013, 10:52 am

ಕೊಪ್ಪ: ಅತಿವೃಷ್ಟಿಯಿಂದ ಬೆಳೆಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ ಪ್ರತಿ ಗುಂಟೆಗೆ ರು. 150 ರೂಪಾಯಿ ಪರಿಹಾರ ಘೋಷಿಸಿರುವುದು ಅವೈಜ್ಞಾನಿಕವಾಗಿದ್ದು, ಇದನ್ನು ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಗುಣವಂತೆ ಗ್ರಾಮದ ರೈತರು ತಾಲೂಕು ಕಚೇರಿ ಮುಂದೆ ಕೊಳೆತ ಅಡಕೆ ಸುರಿದು ಪ್ರತಿಭಟಿಸಿದರು.
ಬಿಡುವಿಲ್ಲದೇ ಮಳೆ ಸುರಿದ ಪರಿಣಾಮ ಅಡಕೆ, ಕಾಫಿ, ಕಾಳು ಮೆಣಸು ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ಶೇ.90 ರಷ್ಟು ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಅಡಕೆ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರ ಜೀವನ ದುಸ್ತರವಾಗಿದೆ. ಸಾಲಕೊಟ್ಟ ಬ್ಯಾಂಕ್ ನವರ ಹಾಗೂ ಲೇವಾದೇವಿಯವರ ಉಪಟಳ ಹೆಚ್ಚಾಗಿದ್ದು, ರೈತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿರುವುದರಿಂದ ಈ ವಿಷಯವನ್ನು ರಾಜ್ಯ ಸರ್ಕಾರ ಗಮನದಲ್ಲಿ ಇಟ್ಟುಕೊಂಡು ರೈತರಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರ ನೀಡಬೇಕು ಎಂದರು.
ಅತಿವೃಷ್ಟಿಯಿಂದ ಹಾನಿಯಾದವರಿಂದ ಅರ್ಜಿ ಪಡೆಯುವ ದಿನಾಂಕವನ್ನು ಮೂಂದುಡಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಪ್ರಶಾಂತ್ ಅವರಿಗೆ ನೀಡಿದರು. ಈ ಸಮಯದಲ್ಲಿ  ರೈತ  ಸತೀಶ್, ಅಭಿಲಾಷ, ಮಂಜುನಾಥ್. ಅರುಣ್, ಮಲ್ಲಪ್ಪ, ಮೋಹನ್, ದಿನೇಶ್ ಸೇರಿದಂತೆ  ನೂರಕ್ಕೂ ಹೆಚ್ಚು ರೈತರು ಇದ್ದರು.
--
ಕಳಪೆ ಕಾಮಗಾರಿ: ಆರೋಪ
ಸೊರಬ: ಕೇವಲ 6 ವರ್ಷದ ಹಿಂದೆ ಡಾಂಬರಿಕರಣ ಮಾಡಿದ್ದ ರಸ್ತೆ ಮತ್ತೆ ಮೊದಲಿನ ಸ್ಥಿತಿಗೆ ತಲುಪಿದ್ದು, ಮಣಿಣನ ರಸ್ತೆಯಂತಾಗಿದೆ ಎಂದು ತಾಪಂ ಸದಸ್ಯ ಬರಗಿ ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆಸಿದವರ ಮೇಲೆ ಹರಿಹಾಯ್ದಿದ್ದಾರೆ. ಬರಗಿ- ದೊಡ್ಡೇರಿ ಸಂಪರ್ಕ ರಸ್ತೆ 2006-07ರಲ್ಲಿ ನಬಾರ್ಡ್ ಯೋಜನೆಯಡಿ ನಿರ್ಮಿಸಲ್ಪಟ್ಟಿದ್ದು, ರು. 25 ಲಕ್ಷ ವೆಚ್ಚವಾಗಿದೆ. ಕಾಮಗಾರಿ ನಡೆಯುವಾಗಲೇ ಕಳಪೆ ಗುಣಮಟ್ಟದ ಕಾಮಗಾರಿ ಎಂದು ಆಕ್ಷೇಪ ವ್ಯಕ್ತಪಡಿಸಿ, ಸರಿಪಡಿಸುವಂತೆ ಕೋರಲಾಗಿತ್ತು ಎಂದರು.ಆದರೆ, ಆಗ ಅಧಿಕಾರಿಗಳ ಗ್ರಾಮಸ್ಥರ, ಸ್ಥಳೀಯ ಜನಪ್ರತಿನಿಧಿಗಳ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ರಸ್ತೆ ಡಾಂಬರೀಕರಣ ಶಾಸ್ತ್ರ ಮಾಡಿದ್ದರಿಂದ ಕೇವಲ ಒಂದು ವರ್ಷದ ಅವಧಿಯಲ್ಲಾಗಲೆ ಡಾಂಬರ್ ಕಿತ್ತು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಅಲ್ಲಿಂದೀಚೆಗೆ 5 ಕಿಮೀ. ಉದ್ದದ ರಸ್ತೆ ಸಂಪೂರ್ಣ ಡಾಂಬರ್ ಕಿತ್ತು ಹೋಗಿದ್ದು, ಇದು ಡಾಂಬರ್ ರಸ್ತೆಯಾಗಿತ್ತು ಎನ್ನುವ ಯಾವುದೇ ಸುಳಿವು ಸಿಗದಂತೆ ನಾಶವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement