ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರವಟಿಗೆ ಉದ್ಘಾಟನೆ

Lingaraj Badiger
Updated On : 2 Dec 2013, 11:31 am

ತರೀಕೆರೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಾಯಾರಿಕೆ ತಣಿಸಲು ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಟಿ.ಆರ್. ಸೋಮಯ್ಯ ಅವರು ಉಚಿತವಾಗಿ ನೀಡಿದ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆಯನ್ನು ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಅವರು ನೆರವೇರಿಸಿದರು. ಬಳಿಕ ಮಾತನಾಡಿ, ನೀರು ಅತ್ಯಂತ ಅಮೂಲ್ಯವಾದುದು. ನೀರನ್ನು ಉಪಯುಕ್ತವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಉಚಿತವಾಗಿ ಕುಡಿಯುವ ನೀರಿನ ಅರವಟಿಗೆ ಕೊಡುಗೆಯಾಗಿ ನೀಡಿದ ಟಿ.ಆರ್.ಸೋಮಯ್ಯ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಟಿ.ಜಿ. ಮಂಜುನಾಥ್, ಕವಾಲಿ ಸೋಮಶೇಖರ್, ಟಿ.ಎಸ್.
ಬಸವರಾಜ್ (ಸಫಾರಿ) ಹೂವಿನ ಅಶೋಕ್, ಯಶಸ್ವಿ ಚಾರಿಟಬಲ್ ಟ್ರಸ್ಟ್‌ನ ಟಿ.ಎನ್. ವಿಶುಕುಮಾರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement