ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಆರೋಗ್ಯಕರ ದಂತದಿಂದ ಉತ್ತಮ ದೃಷ್ಟಿ'

Lingaraj Badiger
Updated On : 2 Dec 2013, 11:39 am

ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.1 ಮಾನವನಿಗೆ ಬಹುಮುಖ್ಯವಾದ ಅಂಗಗಳಲ್ಲಿ ದಂತವೂ ಒಂದಾಗಿದ್ದು, ದಂತ ಪಂಕ್ತಿಗಳು ಆರೋಗ್ಯವಾಗಿದ್ದರೆ, ದೃಷ್ಟಿಯೂ ಉತ್ತಮವಾಗಿರುತ್ತದೆ ಎಂದು ಮಣಿಪಾಲ ದಂತ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯ ಡಾ.ಜಿ. ಶ್ರೀಕಾಂತ್ ತಿಳಿಸಿದರು.
ಪಟ್ಟಣದ ಮೂಡಿಗೆರೆ ಕ್ಲಬ್ ಆವರಣದಲ್ಲಿ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಎಂಜಿಎಂ ಆಸ್ಪತ್ರೆ, ಐಡಿಐ ಚಿಕ್ಕಮಗಳೂರು, ಎಂಜಿಎಂ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,  ದಂತದ ಬಗ್ಗೆ ನಿರ್ಲಕ್ಷ್ಯ ಮಾಡದೇ ಕಾಪಾಡಿಕೊಂಡು ಬಂದಲ್ಲಿ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ಯಶಸ್ಸು: ಮೂಡಿಗೆರೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಮಾತನಾಡಿ, ಲಯನ್ಸ್ ಸಂಸೆ ಸಾರ್ವಜನಿಕರ ಕ್ಷೇತ್ರದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, ಯಸ್ಸನ್ನು ಸಾಧಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಐಡಿಐ ಅಧ್ಯಕ್ಷ ಡಾ. ಭರತ್ ಮೂಡಿಗೆರೆ ಲಯನ್ಸ್ ಸಂಸ್ಥೆಗೆ ರು. 10,000 ಚೆಕ್ಕನ್ನು ಮೂಡಿಗೆರೆ ಲಯನ್ಸ್ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ಗೆ ದೇಣಿಗೆಯಾಗಿ ನೀಡಿದರು.
ಡಾ. ರಾಜೇಶ್ ಹೆಗ್ಡೆ, ಎನ್.ಎಲ್. ಸುಂದರೇಶ್ವರ್, ಲಯನೆಸ್ ಅಧ್ಯಕೆ ಪೂರ್ಣೇಶ್ವರಿ, ಲಕ್ಷ್ಮಣ್ ಗೌಡ, ಹಳೆಕೋಟೆ ರಮೇಶ್, ಭರತ್ ರೆಡ್ಡಿಕೆರೆ, ಎಂ.ಎನ್.ಅಶ್ವತ್ಥ್, ರೂಪಾ ಅಶ್ವತ್ಥ್, ಬಾಲಸುಬ್ರಹ್ಮಣ್ಯ, ವಿ.ಎಲ್.
ಗುರುಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement