ಯೂಥ್ ಹಾಸ್ಟೆಲ್ ಶಾಖೆ ಉದ್ಘಾಟನೆ
ಕೊಪ್ಪ: ಕಡಿಮೆ ಖರ್ಚಿನಲ್ಲಿ ನಮ್ಮ ವಿವಿಧ ಸಂಸ್ಕೃತಿ ತಿಳಿಸುವುದರ ಜೊತೆಗೆ ಚಾರಣ ಮುಂತಾದ ಸಾಹಸಿ ಚಟುವಟಿಗಳಿಗೆ ಉತ್ತೇಜನ ನಿಡುವ ನಿಟ್ಟಿನಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ವಿಶ್ವದಾದ್ಯಂತ ಕಾರ್ಯಪ್ರವೃತ್ತವಾಗಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಸ್. ವೆಂಕಟ್ ನಾರಾಯಣ್ ತಿಳಿಸಿದರು. ಶುಕ್ರವಾರ ತಾಲೂಕಿನ ಕಳಸಾಪುರ ಎಸ್ಟೇಟ್ನ ಕಾಲ್ಗ್ರೀನ್ ವಿಹಾರ ಧಾಮದಲ್ಲಿ ಯೂಥ್ ಹಾಸ್ಟೆಲ್ ಚಿಕ್ಕಮಗಳೂರು ಶಾಖೆ ಉದ್ಘಾಟಿಸಿ, ಮಾತನಾಡಿದ ಅವರು, 1947 ರಲ್ಲಿ ಜರ್ಮನ್ ನಲ್ಲಿ ಆರಂಭಗೊಂಡ ಯೂತ್ ಹಾಸ್ಟೆಲ್ ವಿಶ್ವದ 80 ದೇಶಗಳಲ್ಲಿ 4 ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ ಎಂದರು. ಅಧ್ಯಕ್ಷತೆಯನ್ನು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಕಾರ್ಯಧ್ಯಕ್ಷರು ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಕೆ. ಪುರುಷೋತ್ತಮ, ಯೂಥ್ ಹಾಸ್ಟೆಲ್ ಚಿಕ್ಕಮಗಳೂರಿನ ವಾರ್ಡನ್ ಅನಿಲ್ ಕುಲಾಸೋ, ತಹಸೀಲ್ದಾರ್ ಶ್ರೀಧರ್ ಎಸ್. ಮೂರ್ತಿ ಪಡಿಂತ್ ಇದ್ದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಹಾಸ್ಟೆಲ್ ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ತರುಣೋದಯ ಘಟಕದ ಅಧ್ಯಕ್ಷ ಆ.ನಾ. ವಿಜಯೇಂದ್ರರಾವ್ ನಿರೂಪಿಸಿದರು, ತರುಣೋದಯ ಘಟಕದ ಕಾರ್ಯದರ್ಶಿ ಜಿ. ವಿಜಯ ಕುಮಾರ್ ಸ್ವಾಗತಿಸಿದರು, ಯೂತ್ ಹಾಸ್ಟೆಲ್ ಚಿಕ್ಕಮಗಳೂರಿನ ಮುಖ್ಯಸ್ಥ ಹಮೀದ್ ವಂದಿಸಿದರು.