ವಿದ್ಯಾರ್ಥಿಗಳ ಪ್ರತಿಭಟನೆ
ತರೀಕೆರೆ: ಪಟ್ಟಣದ ಪ.ಪೂ. ಕಾಲೇಜು ತರಗತಿ ವೇಳೆಗಳನ್ನು ಬದಲಾಯಿಸಿರುವುದರ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಾಲೇಜಿಗೆ ದೂರದ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಬರುತ್ತಿದ್ದು, ವೇಳೆ ಬದಲಾವಣೆಯಿಂದ ವಿದ್ಯಾರ್ಧಿಗಳಿಗೆ ತೊಂದೆರೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಅನುರಾಧ ಅವರಿಗೆ ದೂರಿದರು. ಕಾಲೇಜು ಪ್ರಾಂಶುಪಾಲರ ಬಳಿ ಈ ಬಗ್ಗೆ ಮಾತನಾಡುವುದಾಗಿ ಉಪವಿಭಾಗಾಧಿಕಾರಿ ಅನುರಾಧ ಅವರು ಭರವಸೆ ನೀಡಿದರು.